

ಹೈದರಾಬಾದ್: ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ನಟಿ ಶ್ರೀಲೀಲಾ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದ್ದು, ಇದಕ್ಕೆ ಇ ಬೆಡಗಿಯೇ ಸ್ಪಷ್ಟನೆ ನೀಡಿದ್ದಾರೆ. ಐಟಂ ಸಾಂಗ್‌ಗಳಲ್ಲಿ ನಟಿಸಲು ಇನ್ನೂ ಸಮಯ ಸಿಕ್ಕಿಲ್ಲ ಎಂಬುದು ಈ ನಟಿಯ ಅಭಿಪ್ರಾಯವಾಗಿದೆ.
ರಾಘವೇಂದ್ರ ರಾವ್ ನಿರ್ದೇಶನದ ಶ್ರೀಕಾಂತ್ ಅವರ ಪುತ್ರ ರೋಷನ್ ಅಭಿನಯದ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಶ್ರೀಲೀಲಾ ಮೊದಲ ಸಿನಿಮಾದಿಂದಲೇ ಸಾಕಷ್ಟು ಖ್ಯಾತಿ ಗಳಿಸಿ, ನಂತರ ರವಿತೇಜ ಅಭಿನಯದ ಧಮಾಕಾ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದಳು. ಶ್ರೀಲೀಲಾಗೆ ತೆಲುಗು ಇಂಡಸ್ಟ್ರಿಯಲ್ಲಿ ಏಕಕಾಲಕ್ಕೆ 9 ಅವಕಾಶಗಳು ಸಿಕ್ಕಿ ಈ ಬಗ್ಗೆ ಭಾರಿ ಚರ್ಚೆಯಾಗಿತ್ತು. ಆದರೆ ಆ ಒಂಬತ್ತರಲ್ಲಿ ಒಂದೆರಡು ಮಾತ್ರ ಯಶಸ್ವಿಯಾದವು. ಬಳಿಕ ಶ್ರೀಲೀಲಾಗೆ ಅವಕಾಶಗಳು ಕಡಿಮೆಯಾಗುತ್ತ ಹೋದವು.
ಈ ಹಿನ್ನೆಲೆಯಲ್ಲಿ ಈ ನಾಯಕಿ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಸುದ್ದಿ ಹರಿದಾಡಿತು. ಕೆಲವು ನಿರ್ದೇಶಕರು ಕೂಡ ಐಟಂ ಸಾಂಗ್‌ಗಳಿಗಾಗಿ ಶ್ರೀಲೀಲಾ ಳನ್ನು ಸಂಪರ್ಕಿಸಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಆಗಲಿಲ್ಲ ಎನ್ನಲಾಗಿದೆ. ಈ ಅಂತೆ, ಕಂತೆಗಳಿಗೆ ಶ್ರೀಲೀಲಾ ತನ್ನದೇ ಶೈಲಿಯಲ್ಲಿ ಉತ್ತರಿಸಿದ್ದಾಳೆ.
ಸದ್ಯಕ್ಕೆ ಐಟಂ ಸಾಂಗ್ ಮಾಡುವ ಯೋಚನೆ ಇಲ್ಲ. ಅವುಗಳಲ್ಲಿ ನಾನು ನಟಿಸಲ್ಲ ಎಂದು ಹೇಳುತ್ತಿಲ್ಲ, ಆ ಹಾಡುಗಳನ್ನು ಮಾಡಲು ನನಗೆ ಇನ್ನೂ ಸಮಯ ಸಿಕ್ಕಿಲ್ಲ. ಸಮಯ ಬಂದಾಗ ಮಾಡುತ್ತೇನೆ. ಇದೀಗ ಒಳ್ಳೆಯ ಪಾತ್ರ ಮತ್ತು ಕಥೆಗಳ ಆಯ್ಕೆಯತ್ತ ಗಮನಹರಿಸಿದ್ದೇನೆ ಎಂದು ಉತ್ತರಿಸಿದ್ದಾಳೆ.