

ಅಮೆರಿಕದಲ್ಲಿ ಕೊವಿಡ್-19 ಮಹಾಮಾರಿ ಉತ್ತುಂಗಕ್ಕೇರಿದೆ. ಕರೊನಾ ನಿಯಂತ್ರಣಕ್ಕೆ ರಾಷ್ಟ್ರ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ಅಮೆರಿಕಕ್ಕೆ ಇನ್ನೊಂದು ಆಘಾತ ಎದುರಾಗಿದೆ. ಅಮೆರಿಕದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ಅಧಿಕೃತ ವರದಿಯೊಂದರ ಪ್ರಕಾರ ಯುಎಸ್ನಲ್ಲಿ ಅಳಿಲಿನಲ್ಲಿ ಬಬೋನಿಕ್ ಪ್ಲೇಗ್ ಕಾಣಿಸಿಕೊಂಡಿದೆ. ಈ ಬಬೊನಿಕ್ ಪ್ಲೇಗ್ ಕೂಡ ಚೀನಾದಲ್ಲೇ ಹುಟ್ಟಿದ್ದು. ಕೆಲವೇ ದಿನಗಳ ಹಿಂದೆ ಚೀನಾ ಈ ಬಗ್ಗೆ ಎಚ್ಚರಿಕೆ ನೀಡಿತ್ತು.
ಉತ್ತರ ಚೀನಾದ ಸ್ವಾಯತ್ತ ಪ್ರದೇಶವಾದ ಮಂಗೋಲಿಯಾದಲ್ಲಿರುವ ಬಯನ್ನೂರು ಪ್ರದೇಶದಲ್ಲಿ ಬಬೊಲಿಕ್ ಪ್ಲೇಗ್ ಪ್ರಕರಣ ಪತ್ತೆಯಾಗಿದೆ. ಹಾಗಾಗಿ ಎಚ್ಚರಿಕೆಯಿಂದ ಇರಿ ಎಂದು ಚೀನಾ ಹೇಳಿತ್ತು.
ಬಬೋನಿಕ್ ಪ್ಲೇಗ್ ಹುಟ್ಟುವುದು ಇಲಿ, ಅಳಿಲಿನಂತಹ ಮಾರ್ಮೋಟ್ ಜಾತಿಗೆ ಸೇರಿದ ಪ್ರಾಣಿಗಳಿಂದ. ಈ ರೋಗ ಹೊಂದಿದ ಪ್ರಾಣಿಗಳ ಮಾಂಸ ತಿಂದರೆ ಮನುಷ್ಯರಿಗೂ ಸೋಂಕು ತಗುಲುತ್ತದೆ. ಇದಕ್ಕೆ 24 ಗಂಟೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ನಿಶ್ಚಿತ ಎಂದು ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ರಸ್ತೆ ಬದಿಯಲ್ಲೇ ಹೊಂಚು ಹಾಕುವ ಚಿರತೆ, ಬೈಕ್ ಸವಾರರ ಮೇಲೆ ದಾಳಿ!
ಇದೀಗ ಬಬೊನಿಕ್ ಪ್ಲೇಗ್ ಅಮೆರಿಕದಿಂದ ವರದಿಯಾಗಿದೆ. ಮಾರಿಸನ್ನಲ್ಲಿ ಜುಲೈ 11ರಂದು ಅಳಿಲೊಂದರಲ್ಲಿ ಪ್ಲೇಗ್ ಇರುವುದು ಪತ್ತೆಯಾಗಿದ್ದು, ಸ್ಥಳೀಯ ಆರೋಗ್ಯ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ.
ಬಬೋನಿಕ್ ಪ್ಲೇಗ್ ಕಾಣಿಸಿಕೊಂಡವರಲ್ಲಿ ಜ್ವರ, ತಲೆನೋವು, ಶೀತ, ವೀಕ್ನೆಸ್ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಮೈಮೇಲೆ ನೋವಿನ ಗುಳ್ಳೆಗಳೂ ಏಳುತ್ತವೆ. ಯುರೋಪ್ನಲ್ಲಿ 1347 ಮತ್ತು 1351ರ ನಡುವೆ ಈ ಬಬೊನಿಕ್ ಪ್ಲೇಗ್ ವಿಪರೀತವಾಗಿ ಹರಡಿತ್ತು. ಅದೆಷ್ಟೋ ಜನರು ಪ್ರಾಣಕಳೆದುಕೊಂಡಿದ್ದರು. (ಏಜೆನ್ಸೀಸ್)