ವಿರಾಜಪೇಟೆಯಲ್ಲಿ ಸ್ನೇಹಿತರ ಬಳಗದಿಂದ ಕ್ರೀಡಾ ಸಾಧಕರಿಗೆ ಸನ್ಮಾನ

23 gkp 01
ವಿರಾಜಪೇಟೆ ಕಾನ್ ಫ್ರೆಂಡ್ಸ್ ಸ್ನೇಹಿತರ ಬಳಗದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸುಹೇಮ್ ಕಬೀರ್, ಕೀರ್ತನ್ ಕುಟ್ಟಪ್ಪ, ಮಾದಂಡ ಪಿ.ತಿಮ್ಮಯ್ಯ ಮತ್ತು ಮೊಹಮ್ಮದ್ ಕಬೀರ್ ಅವರನ್ನು ಸನ್ಮಾನಿಸಲಾಯಿತು. ಮೊಹಮ್ಮದ್ ತಾರಿಕ್, ಅಬ್ದುಲ್ ಜಲೀಲ್, ಬಿ.ಸಿ.ರಶೀದ್, ಆತೀಫ್ ಮನ್ನಾ,ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
Published on

ಗೋಣಿಕೊಪ್ಪ: ವಿರಾಜಪೇಟೆ ಕಾನ್ ಫ್ರೆಂಡ್ಸ್ ಸ್ನೇಹಿತರ ಬಳಗದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಶನಿವಾರ ಸನ್ಮಾನಿಸಲಾಯಿತು.

ನಗರದ ಕ್ರೇಡೊ ಮೆಡಿಕಲ್ ಸೆಂಟರ್ ಸಮೀಪದ ಖಾಸಗಿ ಸ್ಥಳದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏಷ್ಯಾ ಫೆಸಿಫಿಕ್ ಕಾರ್ ರ‌್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಸುಹೇಮ್ ಕಬೀರ್, ಕೀರ್ತನ್ ಕುಟ್ಟಪ್ಪ, ಕೂರ್ಗ್ ಮಾರುತಿ ಪಾಯಿಂಟ್ ಮಾಲೀಕರಾದ ಶಾಫಿ ಅಹಮ್ಮದ್, ಅಂತಾರಾಷ್ಟ್ರೀಯ ರಗ್ಬಿ ಪಟು ಮಾದಂಡ ಪಿ.ತಿಮ್ಮಯ್ಯ ಹಾಗೂ ಮತ್ತು ಹೊಂಡಾ ಶೋರೂಂ ಮಾಲೀಕರಾದ ಮೊಹಮ್ಮದ್ ಕಬೀರ್ ಅವರನ್ನು ಬಳಗದ ಪ್ರಮುಖರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.

ಪುರಸಭಾ ಸದಸ್ಯ ಮೊಹಮ್ಮದ್ ರಫಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ರೀತಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಗಾಲ್ಫ್, ರಗ್ಬಿ, ಟೆನಿಸ್, ಆಟೋಕ್ರಾಸ್‌ನಂತಹ ಕ್ರೀಡೆಗಳನ್ನು ಅರಿಯಲು ಮತ್ತು ಕಲಿಯಲು ಗರಿಷ್ಠ ಮಟ್ಟದಲ್ಲಿ ಧನ ವ್ಯಯವಾಗುತ್ತದೆ. ಆದರೂ ಮಕ್ಕಳ ಸಾಧನೆಗೆ ಅಡ್ಡಿಯಾಗದೆ ಪಾಲಕರು ಪ್ರೋತ್ಸಾಹ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆಯಾಗಿದೆ ಎಂದರು.

ಪುರಸಭಾ ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ, ಬಾಲ್ಯದಿಂದಲೇ ತಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮಕ್ಕಳ ಚಿಂತನೆಗೆ ಪಾಲಕರು ಪ್ರೋತ್ಸಹ ನೀಡುವುದರಿಂದ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು ಎಂದರು.

ಅಂತಾರಾಷ್ಟ್ರೀಯ ರಗ್ಬಿ ಪಟು ಮಾದಂಡ ಪಿ.ತಿಮ್ಮಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಕೀಂ ರೊಡ್ರಿಗಸ್, ಕಾಂಗ್ರೆಸ್ ಮುಖಂಡರಾದ ಎಜಾಜ್ ಅಹಮ್ಮದ್‌ಮಾತನಾಡಿದರು.

ಪುರಸಭೆಯ ಸದಸ್ಯ ಅಬ್ದುಲ್ ಜಲೀಲ್, ಮುಖಂಡ ಮೊಹಮ್ಮದ್ ತಾರಿಕ್, ಉದ್ಯಮಿಗಳಾದ ಬಿ.ಸಿ.ರಶೀದ್, ಆತೀಫ್ ಮನ್ನಾ, ನಗರ ಠಾಣಾಧಿಕಾರಿ ರವೀಂದ್ರ, ಸ್ನೇಹಿತರ ಬಳಗದ ಫರೂಖ್ ಅಬ್ದುಲ್ಲಾ, ನದಿಮ್ ಶರೀಫ್ ಮತ್ತು ಸ್ನೇಹಿತರ ಬಳಗದ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net