ಕ್ರೀಡಾಕೂಟದಲ್ಲಿ ರಾಜೇಶ್ವರಿ ಕಾಲೇಜ್ ವಿದ್ಯಾರ್ಥಿನಿಯರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

1-RNR-04
Published on

ರಾಣೆಬೆನ್ನೂರ: ನಗರದ ಆರ್‌ಟಿಇಎಸ್ ಕಾಲೇಜ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2023-2024ನೇ ಸಾಲಿನ ತಾಲೂಕು ಮಟ್ಟದ ಪದವಿ-ಪೂರ್ವ ಕಾಲೇಜ್‌ಗಳ ಕ್ರೀಡಾಕೂಟದಲ್ಲಿ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ-ಪೂರ್ವ_ ಕಾಲೇಜ್ ವಿದ್ಯಾರ್ಥಿನಿಯರು ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಬಾಜಿನರಾಗಿದ್ದಾರೆ.
ಬಾಲಕಿಯರ ಗುಂಪು ಆಟದಲ್ಲಿ ಖೋ-ಖೋ, ಬಾಲ್ ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್ ಹಾಗೂ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವೈಯಕ್ತಿಕ ಆಟದಲ್ಲಿ 400, 800, 3000 ಮೀಟರ್ ಓಟದಲ್ಲಿ ಚಂದ್ರಕಲಾ ಗಾಳೇರ ದ್ವಿತೀಯ ಸ್ಥಾನ ಹಾಗೂ 800, 1500 ಮೀಟರ್ ಓಟದಲ್ಲಿ ಸುಂಗಲಾ ಪ್ರಥಮ ಸ್ಥಾನ, 3000 ಮೀಟರ್ ಓಟದಲ್ಲಿ ಹುಸೇನಬಿ ದ್ವಿತೀಯ, 1500 ಮೀಟರ್‌ನಲ್ಲಿ ಭೂಮಿಕಾ ದ್ವಿತೀಯ ಸ್ಥಾನ, ತ್ರಿಬಲ್ ಜಂಪನಲ್ಲಿ ಸುಪ್ರೀತಾ ದ್ವಿತೀಯ ಸ್ಥಾನ, 400*400 ರೀಲೇನಲ್ಲಿ ರಕ್ಷಿತಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಪ್ರಥಮ ಸ್ಥಾನ ಪಡೆದ ಎಲ್ಲ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net