

ರಾಣೆಬೆನ್ನೂರ: ಕ್ರೀಡೆ, ಸಾಂಸತಿಕ ಕಲೆಗಳನ್ನು ಜತೆಗೆ ಪಠ್ಯದ ಗಂಭೀರ ಓದನ್ನು ರೂಡಿಸಿಕೊಂಡರೆ ವಿದ್ಯಾಥಿರ್ಗಳು ತಮ್ಮ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಪ್ರಾಚಾರ್ಯ ಸತೀಶ ಮಾಂಡ್ರೆ ಹೇಳಿದರು.
ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕ್ರೀಡಾ, ಸಾಂಸತಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರಿದು ನಿಮ್ಮಂತಾ ಇಂಜಿನಿಯರಿಂಗ್ ವಿದ್ಯಾಥಿರ್ಗಳು ಸಂಶೋಧನಾ ಪ್ರವೃತ್ತಿ , ಕೌಶಲ್ಯಗಳನ್ನು ಹೆಚ್ಚಾಗಿಸಿಕೊಳ್ಳುವತ್ತ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಪ್ರಮುಖರಾದ ಭಾವನಾ ಪಾಟೀಲ, ಡಾ. ಎಸ್.ಜಿ. ಮಕನೂರ, ಪ್ರವಿಣ ಚೂರಿ, ಪ್ರಿಯಾಂಕ, ರೆಹಮತಿ ಅ್ಸ, ಬಿ.ಎಸ್. ಭಾಗ್ಯಾ ಮತ್ತಿತರರು ಉಪಸ್ಥಿತರಿದ್ದರು.