Sports Authority of India Recruitment 2023: 64 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

sai
Published on

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಸ್‌ಎಐ) ಹೈ-ಪರ್​​​​​ಫಾರ್ಮೆನ್ಸ್​​​ ಅನಲಿಸ್ಟ್ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿ 1984ರಲ್ಲಿ ರೂಪುಗೊಂಡಿದೆ. ದೇಶದಲ್ಲಿ ಕ್ರೀಡಾ ಚಟುವಟಿಕೆ ಉತ್ತೇಜಿಸುವುದು ಎಸ್‌ಎಐನ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡಾ ಅಕಾಡೆಮಿ, ಪ್ರಾದೇಶಿಕ ಕೇಂದ್ರ, ಸೆಂಟರ್ ಆಫ್ ಎಕ್ಸೆಲೆಂಸ್, ಸ್ಪೋರ್ಟ್ಸ್ ಟ್ರೇನಿಂಗ್ ಸೆಂಟರ್‌ಗಳನ್ನು ದೇಶದ ವಿವಿಧೆಡೆ ಸ್ಥಾಪಿಸಿದೆ.

ಒಟ್ಟು ಹುದ್ದೆಗಳು: 64

ಹುದ್ದೆಗಳ ವಿವರ

ಫಿಸಿಯೋಥೆರಪಿಸ್ಟ್ 12

ಸ್ಟ್ರೆಂಥ್ ಆ್ಯಂಡ್ ಕಂಡಿಷನಿಂಗ್ ಎಕ್ಸ್‌ಪರ್ಟ್ 28

ಫಿಸಿಯೋಲಜಿಸ್ಟ್ 08

ಸೈಕೋಲಜಿಸ್ಟ್ 04

ಬಯೋಮೆಕ್ಯಾನಿಕ್ಸ್ 10

ನ್ಯೂಟ್ರಿಷನಿಸ್ಟ್ 01

ಬಯೋಕೆಮಿಸ್ಟ್ 01

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ಡಿಪ್ಲೊಮಾ/ಪದವಿ/ಸಂಬಂಧಿತ ವಿಷಯದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಜತೆಗೆ ಹುದ್ದೆ ಅನ್ವಯ 1,3,5 ವರ್ಷ ಅನುಭವ ಹೊಂದಿರುವುದು ಕಡ್ಡಾಯ.

ಆಯ್ಕೆ ಹೇಗೆ?

ಮೆರಿಟ್ ಲಿಸ್ಟ್ ಹಾಗೂ ಸಂದರ್ಶನದ ಮುಖೇನ ಅಭ್ಯರ್ಥಿ ಆಯ್ಕೆ ನಡೆಯಲಿದ್ದು, ಸಂಬಂಧಿತ ಕ್ಷೇತ್ರದಲ್ಲಿನ ಅನುಭವದ ಆಧಾರದ ಮೇಲೆಯು ಅಂಕ ನಿರ್ಧರಿಸಲಾಗುತ್ತದೆ.

ವಯೋಮಿತಿ

ಅ.05ಕ್ಕೆ ಗರಿಷ್ಠ ವಯೋಮಿತಿ 45 ವರ್ಷ ನಿಗದಿಯಾಗಿದೆ

ವೇತನ

1,05,000ರೂ. ವೇತನ ಗೊತ್ತುಪಡಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 05.10.2023

ಅಧಿಸೂಚನೆಗಾಗಿ

https://sportsauthorityofindia.gov.in/saijobs/ ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net