24ರಿಂದ ಶಿವತತ್ವ ಚಿಂತನೆ ಕುರಿತು ಅಧ್ಯಾತ್ಮ ಪ್ರವಚನ

kashi swamji
ವಾರಣಾಸಿಯ ಜಂಗಮವಾಡಿ ಮಠದ ಸಿಂಹಾಸನಾಧೀಶ್ವರ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು
Published on

ಶಿವಮೊಗ್ಗ: ವಿನೋಬನಗರ ಕಲ್ಲಹಳ್ಳಿಯ ಶ್ರೀ ಪರಮಹಂಸ ಅಥರ್ವ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ 22ನೇ ವಾರ್ಷಿಕೋತ್ಸವ, ಡಾ. ಎಂ.ಈಶ್ವರರೆಡ್ಡಿ ಅವರ 75ನೇ ಜನ್ಮದಿನೋತ್ಸವ ನಿಮಿತ್ತ ಶಿವತತ್ವ ಚಿಂತನೆ ಕುರಿತು ಅಧ್ಯಾತ್ಮ ಪ್ರವಚನ ಕಾರ್ಯಕ್ರಮ ಡಿ.24ರಿಂದ 31ರವರೆಗೆ ಪ್ರತಿದಿನ ಸಂಜೆ 6ಕ್ಕೆ ನಡೆಯಲಿದೆ ಎಂದು ಸಂಸ್ಥೆ ಹಿರಿಯ ವೈದ್ಯ ಡಾ. ಸಿ.ಎ.ಹಿರೇಮಠ್ ಹೇಳಿದರು.

ಕಲ್ಲಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ವಾರಣಾಸಿಯ ಜಂಗಮವಾಡಿ ಮಠದ ಸಿಂಹಾಸನಾಧೀಶ್ವರ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ಶಿವತತ್ತ್ವ ಚಿಂತನೆ ಅಧ್ಯಾತ್ಮ ಪ್ರವಚನ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

24ರಂದು ಸಂಜೆ 6ಕ್ಕೆ ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಯೋಗಗುರು ಸಿ.ವಿ.ರುದ್ರಾರಾಧ್ಯ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಪಿ.ದಿನೇಶ್, ಎಚ್.ಮಲ್ಲಿಕಾರ್ಜುನ ಸ್ವಾಮಿ, ಡಾ. ಎಚ್.ವಿ.ಕೊಟ್ಟೂರೇಶ, ರುದ್ರಮುನಿ ಸಜ್ಜನ್, ಮಹಾಲಿಂಗಯ್ಯ ಶಾಸ್ತ್ರಿ, ಜಿ.ಎಂ.ಮಲ್ಲಿಕಾರ್ಜುಸ್ವಾಮಿ, ಅನಿತಾ ರವಿಶಂಕರ್ ಉಪಸ್ಥಿತರಿರುವರು ಎಂದರು.

ಡಿ.28ರಂದು ಸಂಸ್ಥೆಯ 22ನೇ ವಾರ್ಷಿಕೋತ್ಸವ ಮತ್ತು ಆಧುನಿಕ ಧನ್ವಂತರಿ ನಾಮಾಂಕಿತ, ಆಯುರ್ವೇದಾಚಾರ್ಯ ಡಾ. ಎಂ.ಈಶ್ವರರೆಡ್ಡಿ ಅವರ 75ನೇ ಜನ್ಮಮಹೋತ್ಸವ ಸಮಾರಂಭ ನಡೆಯಲಿದೆ. 31ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿವಿಧ ಮಠದ ಸ್ವಾಮೀಜಿಗಳು ಉಪಸ್ಥಿತರಿರುವರು. ಸಂಸ್ಥೆ ಪ್ರಧಾನ ವೈದ್ಯ ಡಾ. ಮಲ್ಲಿಕಾರ್ಜುನ ಡಂಬಳ ಅಧ್ಯಕ್ಷತೆ ವಹಿಸುವರು ಎಂದರು.

ಶಿವಗಂಗಾ ಯೋಗ ಕೇಂದ್ರದ ಯೋಗಗುರು ಸಿ.ವಿ.ರುದ್ರಾರಾಧ್ಯ, ಡಾ. ಬಿ.ಎಂ.ಶಿವಲೀಲಾ, ಕೆ.ಎಂ.ವಿಜಯಕುಮಾರ್, ಎ.ಎಂ.ಚಂದ್ರಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ಆರೋಗ್ಯ ಉಪನ್ಯಾಸ

ದಿನಾಂಕ-ವಿಷಯ-ಉಪನ್ಯಾಸಕರು

25-ಸ್ವಾಸ್ಥೃ ಸಂಪಾದನೆಯ ಸರಳ ಸೂತ್ರಗಳು-ಡಾ. ಸಿ.ಎ.ಹಿರೇಮಠ್

26-ಜೀವನದ ಯಶಸ್ಸಿನಲ್ಲಿ ಗುರುವಿನ ಮಹತ್ವ-ಡಾ. ಬಿ.ಎಂ.ಶಿವಲೀಲಾ

27-ಮನುಕುಲಕ್ಕೆ ಮಹಾ ಅಪಾಯ ಆಟಿಸಂ-ಡಾ. ಮಲ್ಲಿಕಾರ್ಜುನ ಡಂಬಳ

28-ಆರೋಗ್ಯಕ್ಕೊಂದಿಷ್ಟು ಆಯುರ್ವೇದ ಆಹಾರ-ಡಾ. ಬಿ.ಸಿ.ಸುಮತಿ

29-ಮನುಕುಲದ ಸ್ವಾಸ್ಥ್ಯಕ್ಕಾಗಿ ಆಯುರ್ವೇದ ಜೀವನ ತರಬೇತಿ-ಡಾ. ಮಲ್ಲಿಕಾರ್ಜುನ ಡಂಬಳ

30-ಮಾನಸಿಕ ಆರೋಗ್ಯ-ಡಾ. ಸಿ.ಎ.ಹಿರೇಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net