ಬೆನ್ನುಹುರಿ ಅಪಘಾತಕ್ಕೀಡಾದವರು ಸರ್ಕಾರದ ಯೋಜನೆ ಸದ್ಭಳಕೆ ಮಾಡಿಕೊಳ್ಳಿ; ಪ್ರಕಾಶ ಕೋಳಿವಾಡ

11-RNR-09
Published on

ರಾಣೆಬೆನ್ನೂರ: ಬೆನ್ನುಹುರಿ ಅಪಘಾತದಕ್ಕೀಡಾದ ವ್ಯಕ್ತಿಗಳಿಗೆ ಸರ್ಕಾರದಿಂದ ವಿವಿಧ ಯೋಜನೆಯಡಿ ಸೌಲಭ್ಯಗಳಿದ್ದು, ಅವುಗಳನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಓಂ ಆಸ್ಪತ್ರೆ, ನಿಶಾರ್ಡ್ ಸೇವಾ ಸಂಸ್ಥೆ, ಎಚ್.ಸಿ.ಎಲ್ ಫೌಂಡೇಷನ್ ಹಾಗೂ ದಿ ಅಸೋಯೇಷನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ವತಿಯಿಂದ ಸೋಮವಾರ ನಗರದ ಓಂ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಹಾಗೂ ಬೆನ್ನುಹುರಿ ಅಪಘಾತದ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಓಂ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ. ಮನೊಜ್ ಸಾವಕಾರ ಮಾತನಾಡಿ, ಮುಂದಿನ ದಿನಗಳಲ್ಲಿ ಬೆನ್ನುಹುರಿ ಅಪಘಾತದ ವ್ಯಕ್ತಿಗಳಿಗೆ ಅಂಬುಲೈನ್ಸ್ ಮೂಲಕ ಗ್ರಾಮೀಣ ಭಾಗಕ್ಕೆ ಹೋಗಿ ಬಡ ಕುಟುಂಬದ ಬೆನ್ನುಹುರಿ ಅಪಘಾತದ ವ್ಯಕ್ತಿಗಳಿಗೆ ಪುನ:ಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಬೆನ್ನುಹುರಿ ಅಪಘಾತದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.
ಮಕ್ಕಳ ತಜ್ಞ ಡಾ. ಬಿ.ಆರ್. ಸಾವಕಾರ, ಪ್ರಮುಖರಾದ ಶಿವಕುಮಾರ, ನಿಂಗಪ್ಪ ದೊಡ್ಮನಿ, ಸಂಪತಕುಮಾರ ಪೂಜಾರ, ಪ್ರೀತಿ ಕೆಂಚನಗೌಡರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net