

ಸ್ಪೈಡರ್ಮ್ಯಾನ್ಎಂದರೆ ಎತ್ತರದ ಕಟ್ಟಡಗಳನ್ನು ಸುಲಭವಾಗಿ ಏರುವವನು ಅಥವಾ ಕಟ್ಟಡದಿಂದ ಕಟ್ಟಡಕ್ಕೆ ಹಾರುವವನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಪಕ್ಕದ ದೇಶ ಪಾಕಿಸ್ತಾನದಲ್ಲಿ ನರ್ತಿಸುತ್ತಿರುವ ಸ್ಪೈಡರ್ವ್ಯಾನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲಿನ ಮನರಂಜನಾ ಪಾರ್ಕ್ ಒಂದರಲ್ಲಿ ಪ್ರವಾಸಿಗರ ಎದುರು ಸ್ಪೈಡರ್ವ್ಯಾನ್ ವೇಷಧಾರಿಯೊಬ್ಬ ನರ್ತಿಸುತ್ತಿದ್ದ. ಆತನ ಜತೆಗೆ ಮಿಕ್ಕಿಮೌಸ್ ಪಾತ್ರಧಾರಿಯೂ ಇದ್ದ. ಟಿಕ್ಟಾಕ್ ತಾಣದಲ್ಲಿ ಪೋಸ್ಟ್ ಆಗಿರುವ ಇದನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸಾವಿರಾರು ಹಂಚಿಕೊಂಡಿದ್ದಾರೆ. ಟ್ವಿಟರ್, ಇನ್ಸ್ಟಾಗ್ರಾಮ್ಳಲ್ಲಿಯೂ ಈ ವಿಡಿಯೋ ಸಂಚಲನವನ್ನುಂಟುಮಾಡಿದೆ.