ಆಟಿ ಮಾಸದ ಪ್ರಯುಕ್ತ ವಿಶೇಷ ಪೂಜೆ

Published on

ಸೋಮವಾರಪೇಟೆ: ಪಟ್ಟಣದ ಕಕ್ಕೆಹೊಳೆ ಬಳಿ ಇರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿದಿಯಲ್ಲಿ ಜು.17ರಂದು ಆಟಿ ಮಾಸದ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ಗಣಪತಿ ಹೋಮದೊಂದಿಗೆ ಪೂಜೆ ಪ್ರಾರಂಭಗೊಳ್ಳುವುದು. ಸಂಜೆ 6 ಗಂಟೆಯಿಂದ 8ರವರೆಗೆ ಕರ್ಕಾಟಕ(ಆಟಿ) ಮಾಸದಲ್ಲಿ ಭಗವತಿ ಸೇವೆ, ದುರ್ಗಾದೀಪ ನಮಸ್ಕಾರ ಪೂಜೆ ನಡೆಯಲಿದೆ. ನಂತರ ಮಹಾ ಮಂಗಳಾರತಿ, ಹರಿವರಾಸನಮ್, ಅನ್ನದಾನ ಸೇವೆಗಳು ಆ. 14ರ ವರೆಗೆ ನಡೆಯಲಿದೆ. ಆ.15ರಂದು ಕೊನೆಯ ದಿನವಾಗಿದ್ದು, ಅಂದು ಬೆಳಗ್ಗೆ 9ಗಂಟೆಗೆ ಹೋಮದೊಂದಿಗೆ ಮುಕ್ತಾಯಗೊಳ್ಳಲಿದೆ. ದೇವಾಲಯದ ಅರ್ಚಕರಾದ ಮಣಿಕಂಠ ನಂಬೂದರಿ, ಹಾಗೂ ಜಗದೀಶ್ ಉಡುಪ ರವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net