ಶೃಂಗೇರಿ ಶ್ರೀಗಳಿಂದ ವಿಶೇಷ ಪೂಜೆ

srigeri swamji
ಶೃಂಗೇರಿ ಗುರುನಿವಾಸದಲ್ಲಿ ಶ್ರೀರಾಮನಿಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
Published on

ಶೃಂಗೇರಿ: ತಾಲೂಕಿನಲ್ಲಿ ಶ್ರೀರಾಮನವಮಿ ಹಬ್ಬವನ್ನು ಭಕ್ತರು ಸಂಭ್ರಮದಿಂದ ಆಚರಿಸಿದರು. ಮನೆಯಂಗಳದಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿ ಶ್ರೀರಾಮನಿಗೆ ವಿವಿಧ ಪುಪ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಬಳಿಕ ಪಾನಕ, ಕೋಸಂಬರಿ, ಪಾಯಸ, ವಿವಿಧ ಖ್ಯಾದಗಳನ್ನು ಸವಿದರು.
ವಿದ್ಯಾರಣ್ಯಪುರ ಶ್ರೀರಾಮ ದೇವಾಲಯ, ಪಟ್ಟಣದ ಹರಿಹರಬೀದಿ ಶ್ರೀ ರಾಮದೇವಸ್ಥಾನ, ಬೇಗಾರು ಶ್ರೀರಾಮ, ಹೊಳೆಕೊಪ್ಪ ಶ್ರೀ ರಾಮ ದೇವಾಲಯಗಳಲ್ಲಿ ರಾಮನವಮಿ ಪ್ರಯುಕ್ತ ಪೂಜೆ ನಡೆಯಿತು.
ಶ್ರೀ ಶಾರದಾ ಮಠದ ಆವರಣದ ಶ್ರೀ ಕೋದಂಡರಾಮ ಸನ್ನಿಧಿಯಲ್ಲಿ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಶ್ರೀಮದ್ರಾಮಾಯಣದಲ್ಲಿ ಶ್ರೀರಾಮಾವತಾರ ಘಟ್ಟ ಪಾರಾಯಣ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net