ಬಣಕಲ್, ಕೊಟ್ಟಿಗೆಹಾರ, ಜಾವಳಿಯಲ್ಲಿ ವಿಶೇಷ ಪೂಜೆ

honour
ಕರಸೇವಕರಾಗಿದ್ದ ಟಿ.ಎಂ.ಗಜೇಂದ್ರ, ರಾಮಕೃಷ್ಣ ಕಾರಂತ, ಪಿ.ಜಿ..ಪ್ರವೀಣ್ ಅವರನ್ನು ಕೊಟ್ಟಿಗೆಹಾರದ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು. ಪರೀಕ್ಷಿತ್ ಜಾವಳಿ, ಕೃಷ್ಣ ಟೈಲರ್, ಶಶಿಕುಮಾರ್, ಪ್ರದೀಪ್ ಇತರರಿದ್ದರು.
Published on

ಬಣಕಲ್: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಬಣಕಲ್, ಕೊಟ್ಟಿಗೆಹಾರ, ಜಾವಳಿ, ನಿಡುವಾಳೆ ಸುತ್ತಮುತ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.
ಕೊಟ್ಟಿಗೆಹಾರದ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಒಂದು ಲಕ್ಷ ರಾಮತಾರಕ ಪಠಣ ನಡೆಯಿತು. 1990ರಲ್ಲಿ ಕರಸೇವಕರಾಗಿದ್ದ ಟಿ.ಎಂ.ಗಜೇಂದ್ರ, ರಾಮಕೃಷ್ಣ ಕಾರಂತ, ಪಿ.ಜಿ.ಪ್ರವೀಣ್ ಅವರನ್ನು ಸೀತಾರಾಮ ದೇವಸ್ಥಾನ ಸಮಿತಿ ಮತ್ತು ಮೂಡಿಗೆರೆ ತಾಲೂಕಿನ ಸಂಘ ಪರಿವಾರದಿಂದ ಸನ್ಮಾನಿಸಲಾಯಿತು. ಮೂಡಿಗೆರೆ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಎಸ್.ರಘು, ಮುಖಂಡರಾದ ಅನೂಪ್ ಕುಮಾರ್, ಕೆ.ಸಿ.ರತನ್, ಬಿ.ಎಂ.ಭರತ್, ಸಂಜಯಗೌಡ, ಗ್ರಾಮದ ಮುಖಂಡರು ಇದ್ದರು.
ಕೊಟ್ಟಿಗೆಹಾರದ ದುರ್ಗಾಂಬ ಪೆಟ್ರೋಲ್ ಬಂಕ್‌ನ ವ್ಯವಸ್ಥಾಪಕ ಶರತ್ ಸಾರ್ವಜನಿಕರಿಗೆ ಸಿಹಿ ಹಂಚಿದರು.
ಬಣಕಲ್‌ನ ಮಾಹಮ್ಮಾಯಿ ದೇವಸ್ಥಾನದಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಯಿಂದ ವಿಶೇಷ ಪೂಜೆ, ದೀಪೋತ್ಸವ ನಡೆಯಿತು. ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಪೂಜೆಯಲ್ಲಿ ಪಾಲ್ಗೊಂಡರು. ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ರಾಮತಾರಕ ಹೋಮ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net