ಸಂತ ಅಂತೋಣಿ ಚರ್ಚ್‌ನಲ್ಲಿ ವಿಶೇಷ ಬಲಿಪೂಜೆ

IMG_20250417_181636
ಧರ್ಮಗುರು ರೇ..ಫಾ.ವಿಜಯಕುಮಾರ್ ಪಾದ ತೊಳೆದರು.
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಗುರುವಾರ ಕಡೆಯ ಭೋಜನ ವಿಶೇಷ ಬಲಿಪೂಜೆ ನಡೆಯಿತು.

ದೇವಾಲಯದ ಧರ್ಮಗುರು ವಿಜಯಕುಮಾರ್ ಬಲಿಪೂಜೆ ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೆಸ್ತರು ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡಿದ್ದರು. ಈ ದಿನ ಕ್ರೈಸ್ತರಿಗೆ ಪ್ರಥಮ ಬಲಿಪೂಜೆಯ ಸಂಸ್ಕಾರ ಸ್ಥಾಪನೆ ಹಾಗೂ ಗುರುದೀಕ್ಷೆಯ ಸ್ಥಾಪಿತವಾದ ಸ್ಮರಣೆಯ ದಿನವಾಗಿದೆ. ಗುರುವಾರ ಕಡೆಯ ಭೋಜನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆ ಹಾಗೂ ಪ್ರಭು ಕ್ರಿಸ್ತರು ತಾವು ಮರಣಹೊಂದುವ ಮುನ್ನದಿನ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ಸ್ಮರಣೆಯ ಅಂಗವಾಗಿ ದೇವಾಲಯದ ಧರ್ಮಗುರು ಫಾ.ವಿಜಯಕುಮಾರ್ ಹಿರಿಯರು, ಕ್ರೈಸ್ತರ ಪಾದಗಳನ್ನು ತೊಳೆದರು. ನಂತರ ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net