ಜನರ ಯೋಜನೆ ಅಭಿಯಾನ ಅನುಷ್ಠಾನ ;  ಅಕ್ಟೋಬರ್ 2 ರಂದು  ವಿಶೇಷ ಗ್ರಾಮಸಭೆ

vidhanasoudha
Published on

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಜನರ ಯೋಜನೆ ಅಭಿಯಾನ ಅನುಷ್ಠಾನಕ್ಕೆ ಅಕ್ಟೋಬರ್ 2 ರಂದು ವಿಶೇಷ ಗ್ರಾಮಸಭೆ ಕರೆಯಲು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಸಭೆಯಲ್ಲಿ 2025-26ನೇ ಸಾಲಿನ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆ ಸಿದ್ದಪಡಿಸಲು ನಿರ್ದೇಶಿಸಿದೆ. 232 ತಾಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಈ ಸಭೆ ನಡೆಸಲು ಸೂಚಿಸಲಾಗಿದೆ.

ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಸೂಚನೆ ಅನ್ವಯ ಈ ಸಭೆ ಆಯೋಜಿಸಲಾಗುತ್ತದೆ. ಉನ್ನತ್ ಭಾರತ್ ಅಭಿಯಾನ ಯಡಿಯಲ್ಲಿ ರಾಷ್ಟ್ರದ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಗ್ರಾಮ ಸಭೆಗಳಲ್ಲಿ ಸಕ್ರಿಯಾವಾಗಿ ಭಾಗವಹಿಸಿ, ಸಲಹೆಗಳನ್ನು ವೀಡಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸಲು ಸಹಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಈ ಸಭೆಯಲ್ಲಿ ತೊಡಗಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net