ಬಾಂಗ್ಲಾ ಹಿಂಸಾಚಾರ: ಢಾಕಾದಿಂದ 205 ಭಾರತೀಯರು ವಾಪಸ್​

Air india
Published on

ನವದೆಹಲಿ: ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ರಾಜಧಾನಿ ಢಾಕಾದಿಂದ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ 205 ಭಾರತೀಯರು ಬುಧವಾರ ಮುಂಜಾನೆ ನವದೆಹಲಿಗೆ ಬಂದಿಳಿದರು.

ಇದನ್ನೂ ಓದಿ:

ಭಾರತೀಯರನ್ನು ಕರೆತರಲು ಸರ್ಕಾರ ಮಂಗಳವಾರ ರಾತ್ರಿ ಈ ವಿಶೇಷ ವಿಮಾನವನ್ನು ಢಾಕಾಕ್ಕೆ ಕಳುಹಿಸಿತ್ತು. ಪ್ರಯಾಣಿಕರಲ್ಲಿ ಆರು ನವಜಾತ ಶಿಶುಗಳೂ ಇವೆ ಎಂದು ಅಧಿಕಾರಿಗಳು ಹೇಳಿದರು.

ಈ ಹಿಂದೆ ಘೋಷಿಸಲಾದ ವೇಳಾಪಟ್ಟಿಯ ಪ್ರಕಾರ ಬುಧವಾರ ಢಾಕಾಕ್ಕೆ ಎರಡು ಏರ್ ಇಂಡಿಯಾ ವಿಮಾನಗಳನ್ನು ನಿರ್ವಹಿಸುವುದಾಗಿ ಕಂಪೆನಿ ತಿಳಿಸಿದೆ. ವಿಸ್ತಾರಾ ಮತ್ತು ಇಂಡಿಗೋ ವಿಮಾನಗಳು ಸಹ ವೇಳಾಪಟ್ಟಿಯಂತೆ ಚಲಿಸುತ್ತವೆ. ವಿಸ್ತಾರಾ ಮುಂಬೈನಿಂದ ಢಾಕಾಗೆ ದೈನಂದಿನ ವಿಮಾನ ಸೇವೆಯನ್ನು ನಿರ್ವಹಿಸುತ್ತದೆ. ಒಂದು ವಾರದಲ್ಲಿ ದೆಹಲಿಯಿಂದ ಢಾಕಾಗೆ ಕೇವಲ ಮೂರು ಸೇವೆಗಳನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ.

ಏರ್ ಇಂಡಿಯಾ ಸಂಸ್ಥೆ, ಮುಂಬೈ, ದೆಹಲಿ ಮತ್ತು ಚೆನ್ನೈನಿಂದ ಢಾಕಾಕ್ಕೆ ಸೇವೆಯನ್ನು ನಡೆಸುವುದಾಗಿ ಹೇಳಿದೆ. ಕೋಲ್ಕತ್ತಾದಿಂದ ಢಾಕಾಗೆ ಪ್ರತಿದಿನ ಎರಡು ಸೇವೆಗಳು ನಡೆಯುತ್ತಿವೆ ಎಂದು ಅದು ವಿವರಿಸಿದೆ. ಈ ಸಂದರ್ಭದಲ್ಲಿ, ಇಂಡಿಗೋ ಮತ್ತು ವಿಸ್ತಾರಾ ವಿಮಾನ ಸೇವೆಗಳನ್ನು ಮಂಗಳವಾರ ರದ್ದುಗೊಳಿಸಿರುವುದನ್ನು ಕಂಪೆನಿ ನೆನಪಿಸಿದೆ.

ನೆರೆಯ ಬಾಂಗ್ಲಾದಲ್ಲಿ ಮೀಸಲಾತಿ ಸಂಬಂಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಮತ್ತೊಂದೆಡೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net