ಪಿರಿಯಾಪಟ್ಟಣ ತಾಲೂಕಿನ ಆನಂದಗೆರೆ ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಅಧ್ಯಕ್ಷ ಆನಂದಗೆರೆ ಮಂಜುನಾಥ್ ಆರ್.ಗೌಡ ನೇತೃತ್ವದಲ್ಲಿ ಪದಾಧಿಕಾರಿಗಳ ಜತೆ ಚರ್ಚಿಸಿದರು.
Published on:
Copied
Follow Us
ಬೆಟ್ಟದಪುರ: ಪ್ರಾಮಾಣಿಕವಾಗಿ ರೈತಪರ ಹೋರಾಟದಲ್ಲಿ ತೊಡಗಿರುವ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಗೆ ಕೆಲವೇ ದಿನಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸುವ ಮೂಲಕ 500ಕ್ಕೂ ಹೆಚ್ಚಿನ ಸದಸ್ಯರನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜತೆಗೆ ಸಂಘದ ಬಲವರ್ಧನೆ ವಿಶೇಷ ಒತ್ತು ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಆನಂದಗೆರೆ ಮಂಜುನಾಥ್ ಆರ್.ಗೌಡ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಆನಂದಗೆರೆ ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಆಯೋಜಿಸಿದ್ಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರೈತ ಸಂಘವು ಸುಮಾರು 5000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು, ನಿತ್ಯ ನಿರಂತರವಾಗಿ ರೈತಪರ ಸಮಸ್ಯೆಗಳ ವಿರುದ್ಧ ಹೋರಾಡಿ ನ್ಯಾಯ ಕಲ್ಪಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರನ್ನು ಸಂಘಕ್ಕೆ ಸೇರಿಸುವುದರ ಜತೆಗೆ ಅವರಿಗೆ ಸೂಕ್ತ ಖಾತೆ ನೀಡುವ ಮೂಲಕ ರೈತಪರ ಸೇವೆ ಮಾಡುವಂತೆ ಸಲಹೆ ನೀಡಲಾಗುವುದು. ಬಳಿಕ ಎಲ್ಲ ಸದಸ್ಯರಿಗೆ ಔತಣಕೂಟ ಆಯೋಜಿಸಿ, ಸಭೆ ನಡೆಸಿ ಸಂಘದ ಮುಂದಿನ ಕಾರ್ಯಗಳು, ಗುರಿಗಳ ಬಗ್ಗೆ ಚರ್ಚಿಸಲಾಗುವುದು ಎಂದರು. ಈಗಾಗಲೇ ನಮ್ಮ ಸಂಘದ ಸಂಸ್ಥಾಪಕ ಶರಣಪ್ಪ ದೊಡ್ಡಮನೆ ಅವರು ದೂರವಾಣಿ ಕರೆ ಮೂಲಕ ಹಲವು ಮಾರ್ಗದರ್ಶನ ನೀಡಿದ್ದಾರೆ. ಸದಸ್ಯರಿಗೆ ಖಾತೆಗಳನ್ನು ನೀಡುವ ವಿಚಾರ ಸೇರಿದಂತೆ ಹಲವು ವಿಷಯ ಕುರಿತು ಚರ್ಚಿಸಲು ನ.11ರಂದು ಎಲ್ಲ ಸದಸ್ಯರನ್ನೊಳಗೊಂಡಂತೆ ಗಂಗಾವತಿಗೆ ಆಹ್ವಾನಿಸಿದ್ದಾರೆ. ಹಾಗಾಗಿ, ಪ್ರತಿಯೊಬ್ಬ ಸದಸ್ಯರು ಆಗಮಿಸುವ ಮೂಲಕ ಅಲ್ಲಿನ ಸಭೆಯನ್ನು ಯಶಸ್ವಿ ಮಾಡಬೇಕಿದೆ ಎಂದು ಕೋರಿದರು.
ಸಂಘದ ಪದಾಧಿಕಾರಿಗಳಾದ ತಿಮ್ಮೇಗೌಡ, ಮಹಾದೇವ, ರವಿ ಸಿ.ಡಿ, ರವಿ ಶಾಮಿಯಾನ, ಅಂಬಲಾರೆ ಹರೀಶ್, ವಾಟರ್‌ಮ್ಯಾನ್ ರಾಕೇಶ್, ಯೋಗೇಶ್, ಭೋಜಣ್ಣ, ಬೋಜ, ಗಣೇಶ್, ಹರೀಶ್ ಗೌಡ ಇತರರು ಇದ್ದರು.