ಮುದ್ರೆಕಲ್‌ನಲ್ಲಿ ಶ್ರೀರಾಮನಿಗೆ ವಿಶೇಷ ಅಲಂಕಾರ

oplus_34
ಹಿರೀಸಾವೆ
Published on

ಹಿರೀಸಾವೆ: ಪಟ್ಟಣದ ಮುದ್ರೆಕಲ್ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹೋಬಳಿಯಾದ್ಯಂತ ಶ್ರೀರಾಮನವಮಿ ಆಚರಣೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆಯೇ ಶ್ರೀರಾಮ ಮಂದಿರಗಳಿಗೆ ಹಸಿರು ಚಪ್ಪರ ಹಾಕಿ, ಬಾಳೆಕಂದು ಕಟ್ಟಿ ಸಿಂಗರಿಸಲಾಯಿತು. ಕೇಸರಿ ಬಂಟಿಂಗ್ಸ್ ಕಟ್ಟಿ ಅಲಂಕಾರ ಮಾಡಲಾಯಿತು.

ರಾಮಮಂದಿರ ಇಲ್ಲದ ಗ್ರಾಮಗಳಲ್ಲಿ ಅರಳಿ ಮರದ ಕೆಳಗೆ ಹಸಿರು ಚಪ್ಪರ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶ್ರೀರಾಮಚಂದ್ರ ಪ್ರಭುವಿನ ಭಾವಚಿತ್ರ ಪ್ರತಿಷ್ಠಾಪನೆ ಮಾಡಿ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ಮಧ್ಯಾಹ್ನ ಸುಮಾರನಲ್ಲಿ ಶ್ರೀರಾಮಚಂದ್ರ ಪ್ರಭುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ, ಪಾನಕ ಹಾಗೂ ಮಜ್ಜಿಗೆ ವಿತರಿಸಲಾಯಿತು. ಪಟ್ಟಣದ ವಿವಿಧೆಡೆ ಸೇರಿದಂತೆ, ದಿಡಗ, ಉಳ್ಳಾವಳ್ಳಿ, ಮತಿಘಟ್ಟ, ಹೊನ್ನೇನಹಳ್ಳಿ, ಅರಕೆರೆ, ಪಿ.ಹೊಸಹಳ್ಳಿ, ನರಿಹಳ್ಳಿ, ಮಾದಲಗೆರೆ, ಬೆಳಗೀಹಳ್ಳಿ ಬಾಳಗಂಚಿ, ಜಿನ್ನೇನಳ್ಳಿ ಹಾಗೂ ವಿವಿಧ ಗ್ರಾಮಗಳಲ್ಲಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net