

ಬೆಂಗಳೂರು: ಲಂಡನ್‌ನ ಬಸವೇಶ್ವರ ಪುತ್ಥಳಿಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಮಾಲಾರ್ಪಣೆ ಮಾಡಿದರು.
ಕರ್ನಾಟಕ ಕಾಮನ್ ವೆಲ್ತ್ ಸಂಸದೀಯ ಸಂಘದ ಕರ್ನಾಟಕ ಶಾಖೆಯ ವೀಕ್ಷಕರಾಗಿ ಘಾನಾ ದೇಶದಲ್ಲಿ ನಡೆದ 66ನೇ ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನ ಹಾಗೂ ಇತರೆ ದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ಅವರು ಸೋಮವಾರ ಯುನೈಟೆಡ್ ಕಿಂಗ್ ಡಮ್ನ ಲಂಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು.
ಲಂಡನ್ ನಗರ ಮಾಜಿ ಮೇಯರ್ ಹಾಗೂ ಅಲ್ಲಿನ ಬಸವ ಸಮಿತಿ ಅಧ್ಯಕ್ಷ ಡಾ. ನೀರಜ್ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.