ಅಲ್ಪ ಹೂಡಿಕೆ, ಅಧಿಕ ಗಳಿಕೆ ಸುಳ್ಳು, ವಂಚನೆ ವಿರುದ್ಧ ಎಸ್‌ಪಿ ಎಚ್ಚರಿಕೆ

K PARASHURAM ctd
Published on

ಚಿತ್ರದುರ್ಗ: ಬಿಟ್, ಒನ್ ಕಾಯಿನ್ ಇತ್ಯಾದಿ ಕ್ರಿಪ್ಟ್ರೋ ಕರೆನ್ಸಿಗಳಿಂದ ಅಲ್ಪ ಪ್ರಮಾಣದ ಹೂಡಿಕೆ ಮಾಡಿ, ಕಡಿಮೆ ಅವಧಿಯಲ್ಲಿ ಸುಲಭ ವಾಗಿ ಅತೀ ಹೆಚ್ಚು ಲಾಭವನ್ನು ಗಳಿಸುವ ವಂಚನೆಗೆ ಒಳಗಾಗದಂತೆ ಎಸ್ಪಿ ಕೆ.ಪರಶುರಾಮ್ ಅವರು ನಾಗರಿಕರನ್ನು ಎಚ್ಚರಿಸಿದ್ದಾರೆ.

ಹೆಚ್ಚಿನ ಲಾಭದ ಆಸೆಯಿಂದ ಮೋಸಕ್ಕೆ ಒಳಗಾಗುವಂಥ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಣ ಹೂಡಿಕೆ ಮಾಡಿಸಿಕೊಂಡು ಆರಂಭದಲ್ಲಿ ಅಲ್ಪ ಮೊತ್ತಕ್ಕೆ ಹೆಚ್ಚಿನ ಲಾಭಾಂಶವನ್ನು ಕೊಡುವ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿ ಮೋಸಗೊಳಿಸುವುದು. ಪ್ರಖ್ಯಾತ ಕ್ರಿಪ್ಟ್ರೊ ಕರೆನ್ಸಿಗಳ ಹೆಸರಿನಲ್ಲಿ ನಕಲಿ ಕ್ರಿಪ್ಟ್ರೋ ಕರೆನ್ಸಿಗಳನ್ನು ಸೃಷ್ಟಿಸಿ ವಂಚಿಸುವುದು ಕೂಡ ನಡೆದಿದೆ.

ಕಾನೂನಿನ ಮಾನ್ಯತೆ ಇಲ್ಲದ, ಸಾಂಸ್ಥಿಕ ಸ್ವರೂಪ ಇಲ್ಲದ, ಡಾರ್ಕ್‌ನೆಟ್, ಬ್ಲಾಕ್ ಚೈನ್ ಮೊದಲಾದ ಬ್ರೌಸಿಂಗ್ ಪ್ಲಾಟ್ ಫಾರಂಗಳಲ್ಲಿ ಲಭ್ಯವಿರುವ ಕ್ರಿಪ್ಟ್ರೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡದೆ, ಆರ್‌ಬಿಐ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳ ಹೂಡಿಕೆ ಮಾಡುವ ಮೂಲಕ ಕಷ್ಟಪಟ್ಟು ದುಡಿದ ಹಣವನ್ನು ರಕ್ಷಿಸಿಕೊಳ್ಳುವಂತೆ ಎಸ್‌ಪಿ ನಾಗರಿಕರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net