ಸರ್ಕಾರ ಉಳಿಸಿಕೊಳ್ಳಲು ಸಾಹಸ; ಎಸ್​ಪಿ ಮುಖಂಡ ಅಖಿಲೇಶ್ ಯಾದವ್ ಅಭಿಮತ

akilesh
Published on

ಕೇವಲ ಮಿತ್ರಪಕ್ಷಗಳನ್ನು ಓಲೈಸಿ ಸರ್ಕಾರ ಉಳಿಸಿಕೊಳ್ಳಲು ನಿರ್ಮಲಾ ಸೀತಾರಾಮನ್ ಬಜೆಟ್ ಹರಸಾಹಸ ಪಟ್ಟಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ. ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಮೋದಿ ಪ್ರಧಾನಿಯಾಗಲು ಪ್ರಮುಖ ಪಾತ್ರ ವಹಿಸಿರುವ ಉತ್ತರ ಪ್ರದೇಶವನ್ನು ಬಜೆಟ್‌ನಲ್ಲಿ ತಾತ್ಸಾರ ಮಾಡಲಾಗಿದೆ ಎಂದು ಅಖಿಲೇಶ್ ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net