

ಹೈದರಾಬಾದ್: ಸೀನಿಯರ್ ಹೀರೋಗಳಿಗೆ ಹೀರೋಯಿನ್ ಗಳನ್ನು ಆಯ್ಕೆ ಮಾಡುವುದು ತುಂಬಾ ಕಷ್ಟ. ಹಿರಿಯ ನಾಯಕರ ಜೊತೆ ಸಿನಿಮಾ ಮಾಡಲು ಸ್ಟಾರ್ ಹೀರೋಯಿನ್‌ಗಳು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ತುಂಬಾ ಕಿರಿಯ ನಾಯಕಿಯರನ್ನು ಹಾಕುವುದು ಕೂಡಾ ಕಷ್ಟ. ತುಂಬಾ ಚಿಕ್ಕವರಾಗಿದ್ದರೆ ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ ಔಟ್ ಆಗುವುದಿಲ್ಲ. ಆದರೆ ಟಾಲಿವುಡ್‌ನಲ್ಲಿ ಅಷ್ಟಾಗಿ ಜನಪ್ರಿಯತೆ ಇಲ್ಲದ ಹೊಸ ನಾಯಕಿಯನ್ನು ಸೀನಿಯರ್ ಹೀರೋಗೆ ಜೋಡಿಯಾಗಿಸಲಾಗಿದೆ.
ಇದನ್ನೂ ಓದಿ: ಶಿವರಾಜಕುಮಾರ್ ಹೊಸ ಚಿತ್ರ ಭೈರವನ ಕೊನೆ ಪಾಠ
ತಮಿಳಿನ ಹೀರೋಯಿನ್, ಕಿರಿವಯಸ್ಸಿನ ಐಶ್ವರ್ಯಾ ರಾಜೇಶ್ ಅವರನ್ನು ಹಿರಿಯ ನಾಯಕ ವೆಂಕಟೇಶ್ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದು, ಇವರಿಬ್ಬರ ಸ್ಕ್ರೀನ್ ಕೆಮಿಸ್ಟ್ರಿ ಎಷ್ಟು ಮಾತ್ರ ವರ್ಕೌಟ್ ಆಗುತ್ತದೆ ಎಂಬ ಪ್ರಶ್ನೆ ಎದ್ದಿದೆ.
ಐಶ್ವರ್ಯಾ ರಾಜೇಶ್ ವಾಸ್ತವವಾಗಿ ತೆಲುಗು ನಟಿ. ಅವರ ತಂದೆ ರಾಜೇಶ್ ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ನಾಯಕರಾಗಿದ್ದರು. ಆದರೆ ಅವರ ಕುಟುಂಬ ಚೆನ್ನೈನಲ್ಲಿ ನೆಲೆಸಿದ್ದರಿಂದ ಅವರ ಪುತ್ರಿ ಕಾಲಿವುಡ್ನಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದರು. ಈಗ ಅವರು ಅತ್ಯಂತ ಪ್ರತಿಭಾವಂತ ನಾಯಕಿಯಾಗಿದ್ದಾರೆ.
ಇದೇ ವೇಳೆ ವೆಂಕಟೇಶ್ ಮತ್ತು ಅನಿಲ್ ರಾವಿಪುಡಿ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದಲ್ಲಿ ವೆಂಕಟೇಶ್ ಪತ್ನಿಯಾಗಿ ಐಶ್ವರ್ಯಾ ರಾಜೇಶ್ ನಟಿಸಲಿದ್ದಾರೆ. ಗೆಳತಿಯ ಪಾತ್ರದಲ್ಲಿ ಮೀನಾಕ್ಷಿ ಚೌಧರಿ ನಟಿಸಲಿದ್ದಾರೆ. ಐಶ್ವರ್ಯಾ ರಾಜೇಶ್ ಅವರ ತಂದೆ ರಾಜೇಶ್ ಮತ್ತು ವೆಂಕಟೇಶ್ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು
ಹೊಸ ಸಿನಿಮಾದಲ್ಲಿ ಗೆಳೆಯನ ಮಗಳ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ನೆಟ್ಟಿಗರು ತಮಾಷೆಯಾಗಿ ಮಾತನಾಡುತ್ತಿದ್ದಾರೆ. ಇದುವರೆಗೆ ಅನಿಲ್ ರವಿಪುಡಿ ಜೊತೆಯಲ್ಲಿ ಮಾಡಿದ ಎಫ್2 ಮತ್ತು ಎಫ್3 ಸಿನಿಮಾಗಳು ಒಳ್ಳೆಯ ಹಿಟ್ ಆಗಿದ್ದವು. ಈಗ ಈ ಕಾಂಬಿನೇಷನ್‌ನಲ್ಲಿ ಮೂರನೇ ಸಿನಿಮಾ ಬಿಡುಗಡೆಯಾಗುತ್ತಿದೆ
ದಿಲ್ ರಾಜು ನಿರ್ದೇಶನದ ಈ ಚಿತ್ರವನ್ನು ಮುಂದಿನ ಸಂಕ್ರಾಂತಿ ಸಂದರ್ಭಕ್ಕೆ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸುತ್ತಿದ್ದಾರೆ.