ತಿ.ನರಸೀಪುರ: ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಜೂ.10 ರಂದು ಸ್ವಾಮಿಯವರ ಸೌರನರಸಿಂಹ ಜಯಂತ್ಯುತ್ಸವವನ್ನು ಆಯೋಜಿಸಲಾಗಿದೆ.
ಸೌರಮಾನ ನರಸಿಂಹ ಜಯಂತಿ ಪ್ರಯುಕ್ತ ಬೆಳಗ್ಗೆ 10 ಗಂಟೆಗೆ ಗೋಪೂಜೆ, ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಅಲಂಕಾರ, ಮಹಾ ಮಂಗಳಾರತಿ, ಶಾತ್ತುಮುರೈ ಹಾಗೂ ಸಂಜೆ 4.30 ಗಂಟೆಗೆ ತಿರುವೀದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಯ ನಂತರ ಗೋ ಪೂಜೆಯನ್ನು ನಡೆಸಿ, ಗೋವುಗಳಿಗೆ ಉಚಿತ ಮೇವುಗಳನ್ನು ನೀಡಲಾಗುತ್ತದೆ ಎಂದು ಜಯಂತ್ಯುತ್ಸವ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.