

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ವಿಆರ್ಎಲ್ ಮೀಡಿಯಾಗೆ ಮತ್ತೊಂದು ಪ್ರಶಸ್ತಿ ಒಲಿದಿದೆ.
ಪುಣೆಯ ಸೂರ್ಯದತ್ತ ಸಮೂಹ ಶಿಕ್ಷಣ ಸಂಸ್ಥೆಯು ಪತ್ರಿಕೋದ್ಯಮ ಸಾಧನೆ ಗುರುತಿಸಿ ಕೊಡ ಮಾಡುವ 'ಸೂರ್ಯಭೂಷಣ' ರಾಷ್ಟ್ರೀಯ ಪುರಸ್ಕಾರ ವಿಆರ್ಎಲ್ ಮೀಡಿಯಾ ಎಂಡಿ ಆನಂದ ಸಂಕೇಶ್ವರ ಅವರಿಗೆ ಒಲಿದಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಸೂರ್ಯಭೂಷಣ ರಾಷ್ಟ್ರೀಯ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಆನಂದ ಸಂಕೇಶ್ವರ ಅವರ ಅನುಪಸ್ಥಿತಿಯಲ್ಲಿ ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್. ಚನ್ನೇಗೌಡ ಸ್ವೀಕರಿಸಿದರು. ಸೂರ್ಯದತ್ತ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಡಾ. ಸಂಜಯ್ ಬಿ. ಚೋರ್ಡಿಯಾ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದರು.