ಮದುವೆ ಆಗುವ ಆಸೆ ಇಲ್ಲ…ರಾಜಕೀಯಕ್ಕೆ ಹೋಗಬೇಕು ಅನ್ನೋ ಪ್ಲ್ಯಾನ್​​ ಇದೆ; ಸೋನು ಶ್ರೀನಿವಾಸ್ ಗೌಡ

Sonu Srinivas gowda
Published on

ಬೆಂಗಳೂರು: ಸೋಶಿಯಲ್​​ ಮೀಡಿಯಾ ಸ್ಟಾರ್​ ಸೋನು ಶ್ರೀನಿವಾಸ್ ಗೌಡ ಯುಟ್ಯೂಬ್ ವಿಡಿಯೋ ಮೂಲಕ ತಮ್ಮ ಮುಂದಿನ ಪ್ಲ್ಯಾನ್​ ಏನು ಎಂಬುದನ್ನು ಸ್ಪಷ್ಟಬಾಗಿ ಹೇಳಿದ್ದಾರೆ.

Sonu Srinivas Gowda

ಸೋನು ಮಾತನಾಡಿ, ಕಾನೂನು ಪ್ರಕಾರ ನಾನು ಕೇಸ್‌ ಬಗ್ಗೆ ಮಾತನಾಡುವಂತಿಲ್ಲ. ಆ ವ್ಯಕ್ತಿ ಅವರಪ್ಪ ಅಮ್ಮ ಜೊತೆ ಇದ್ದಾರೆ ನಾನು ನನ್ನ ಮನೆಯಲ್ಲಿ ನೆಮ್ಮದಿಯಾಗಿ ಇದ್ದೀನಿ. ಕೇಸ್ ಇದ್ದಾಗ ಕೋರ್ಟ್‌ಗೆ ಹೋಗಿ ಬರ್ತೀನಿ. ಜೈಲಿನಿಂದ ಹೊರ ಬರುವಾಗ ಮೀಡಿಯಾದವರನ್ನು ನೋಡಿ ಶಾಕ್ ಆಗಿಲ್ಲ ಏಕೆಂದರೆ ಮೀಡಿಯಾ ನನಗೆ ಹೊಸದಲ್ಲ ಆದರೆ ಅವರಿಗೆ ಇದೇ ನ್ಯೂಸ್‌ ಬೇಕು ಅಂತ ಬಂದಿದ್ದಾರೆ ಎಂದು ನಕ್ಕಿ ಸುಮ್ಮನಾದೆ. ಮೊದಲು ತುಂಬಾ ಪ್ರಮೋಷನ್‌ಗಳನ್ನು ಮಾಡಿ ಹಣ ಸಂಪಾದನೆ ಮಾಡುತ್ತಿದ್ದೆ ಈಗ ಸ್ವಲ್ಪ ಕಡಿಮೆ ಆಗಿದೆ..ಹೇಗೆ ಲೆಕ್ಕಚಾರ ಮಾಡಿದ್ರೂ ತಿಂಗಳಿಗೆ 50 ಸಾವಿರ ಅಷ್ಟೇ.

ನಾನು ಯುಟ್ಯೂಬ್‌ ವ್ಲಾಗ್ ಮಾಡಿಕೊಂಡು ದಿನ ಕಳೆಯುತ್ತಿರುವೆ. ಈ ಪ್ರಪಂಚದಲ್ಲಿ ಒಳ್ಳತನಕ್ಕೆ ಬೆಲೆ ಇಲ್ಲ ನಾನು ಒಳ್ಳೆ ಕೆಲಸ ಮಾಡಿದಕ್ಕೆ ಜೈಲಿಗೆ ಹೋಗಿ ಬಂದಿದ್ದು, ನನ್ನ ಪರಿಸ್ಥಿತಿಯನ್ನು ಎಲ್ಲರೂ ನೋಡಿರುತ್ತೀರಾ. ನಾನು ನಟಿ ನಾಯಕಿ ಆಗಬೇಕು ಅಂತ ಮೊದಲು ಇಷ್ಟ ಪಟ್ಟಿದ್ದೆ ಆದರೆ ಈಗ ಇಷ್ಟ ಇಲ್ಲ. ರಾಜಕೀಯದಲ್ಲಿ ಬ್ಯುಸಿಯಾಗಬೇಕು ಅಂದುಕೊಂಡಿರುವೆ. ದೇವರ ಆಟದ ಮುಂದೆ ನಾನು ಏನೂ ಪ್ಲ್ಯಾನ್ ಮಾಡಲು ಆಗಲ್ಲ ಎಂದಿದ್ದಾರೆ.

Sonu Srinivas Gowda 1

ನನ್ನ ಮದುವೆ ಯಾವಾಗ ಅಂತ ಗೊತ್ತಿಲ್ಲ ನನಗೆ ಮದುವೆ ಆಗಲು ಆಸೆನೂ ಇಲ್ಲ. ಹುಡುಗ ಹೇಗಿರಬೇಕು ಅಂದ್ರೆ ನಮ್ಮಿಬ್ಬರ ನಡುವೆ ಗೌರವ ಹೆಚ್ಚಿರಬೇಕು. ರಾಜಕೀಯಕ್ಕೆ ಹೋಗಬೇಕು ಅನ್ನೋದು ಅಷ್ಟೇ ನನ್ನ ಪ್ಲ್ಯಾನ್. ಸೋಷಿಯಲ್ ಮೀಡಿಯಾದಲ್ಲಿ ಜನರು ಸಾವಿರ ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ತಲೆ ಕೊಡುವುದಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net