ಸೋನು ಶ್ರೀನಿವಾಸ್ ಗೌಡ ಕೇಸ್: ಮಗುವಿನ ತಂದೆ–ತಾಯಿಗೆ ಕೌನ್ಸಿಲಿಂಗ್​ಗೆ ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

sonu
Published on

ಬೆಂಗಳೂರು: ಸೋನು ಶ್ರೀನಿವಾಸ್ ಗೌಡ ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

ಮಗುವಿನ ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲು ಇಲ್ಲವೇ ತಂದೆ ತಾಯಿಗೆ ಮಗುವನ್ನು ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ.

ಮಗುವನ್ನು ಅಕ್ರಮವಾಗಿ ದತ್ತು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸೋನು ಶ್ರೀನಿವಾಸಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ ಎಂದು ವರದಿಯಾಗಿದೆ.

ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಬಳಿಕವೂ ಮಗುವಿನ ಪಾಲಷಕರು ಯಾಕೆ ದೂರು ನೀಡಿಲ್ಲ, ಅವರು ಆಮಿಷಕ್ಕೆ ಒಳಗಾಗಿದ್ದರಾ? ಎಂಬ ಆಯಾಮಗಳಲ್ಲಿ ಕೌನ್ಸಿಲಿಂಗ್ ಮಾಡಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net