ಶೀರ್ಷಾಸನದಲ್ಲೇ ದಾಖಲೆ: ಚಾರ್​ಮಿನಾರ್ ಮುಂದೆ 3 ಗಂಟೆಗೂ ಅಧಿಕ ಕಾಲ ತಲೆಕೆಳಗಾಗಿದ್ದ ವ್ಯಕ್ತಿ..

Yoga F
Published on

ಹೈದರಾಬಾದ್​: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಾದ್ಯಂತ ಮಾತ್ರವಲ್ಲದೆ ವಿಶ್ವದ ಹಲವೆಡೆ ವಿಶೇಷವಾಗಿ ಆಚರಿಸಲಾಗಿದೆ. ಅಲ್ಲದೆ ಅಪಾರ ಸಂಖ್ಯೆಯ ಯೋಗಪಟುಗಳು ತಮ್ಮ ಯೋಗಪಟುತ್ವವನ್ನು ಪ್ರದರ್ಶಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಅದ್ಧೂರಿ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದು, ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸಂಪುಟದ ಅನೇಕ ಸಚಿವರು, ಶಾಸಕರು ಪಾಲ್ಗೊಂಡಿದ್ದರು. ಅಲ್ಲದೆ ಸುಮಾರು 15 ಸಾವಿರ ಯೋಗಪಟುಗಳನ್ನು ಆಸನಗಳನ್ನು ಪ್ರದರ್ಶಿಸಿದ್ದರು.

ಆದರೆ ಹೈದರಾಬಾದ್​ನಲ್ಲೊಬ್ಬ ಶೀರ್ಷಾಸನ ಹಾಕಿಯೇ ದಾಖಲೆ ಮಾಡಿದ್ದಾನೆ. ಇಲ್ಲಿನ ಚಾರ್​ಮಿನಾರ್ ಮುಂದೆ ಶೀರ್ಷಾಸನ ಹಾಕಿದ ಈತ 3 ಗಂಟೆ, 33 ನಿಮಿಷ, 3 ಸೆಕೆಂಡುಗಳ ಕಾಲ ತಲೆ ಕೆಳಗಾಗಿಯೇ ಇದ್ದು ದಾಖಲೆ ಮಾಡಿದ್ದಾನೆ. ಯೋಗಪಟು, ಬಿಹಾರ ಮೂಲದ ಸೋನು ಕುಮಾರ್​ ಅವರ ಈ ಸಾಧನೆಯನ್ನು ವಿಶ್ವದಾಖಲೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net