ಅಣ್ಣ ತಮ್ಮನ ನಡುವೆ ಗಲಾಟೆ! ತಂದೆ ಮೃತದೇಹದ ಅರ್ಧ ಭಾಗ ಕೇಳಿದ ಇಬ್ಬರು ಮಕ್ಕಳು..Father Funeral

Sons Fight Over Father Funeral Insist on Dividing Corpse
Published on

ಮಧ್ಯಪ್ರದೇಶ:  (Father Funeral ) ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡು ದೂರವಾದ ಸಹೋದರರು ತಂದೆ ಸಾವನ್ನಪ್ಪಿದ ವೇಳೆ  ಅಂತ್ಯಕ್ರೀಯೆಯಲ್ಲಿ  ಮೃತದೇಹದ ಅರ್ಧ ಭಾಗ ಬೇಕು ಎಂದು ಗಲಾಟೆ ಮಾಡಿದ್ದಾರೆ.  ಟಿಕಮ್​​ಗಢ್​​ ಜಿಲ್ಲೆಯಿಂದ ಸುಮಾರು 45 ಕಿಮೀ ದೂರವಿರುವ ಲಿಧೋರತಾಲ್ ಅನ್ನೋ ಗ್ರಾಮದಲ್ಲಿ  ಈ ಘಟನೆ ನಡೆದಿದೆ.

ನಡೆದಿದ್ದೇನು?: ಅಣ್ಣ- ತಮ್ಮ ಆಸ್ತಿ ವಿಚಾರಕ್ಕೆ ತಮ್ಮ ದೂರವಾಗಿದ್ದರು. ಆದ್ರೆ ಆಕಸ್ಮಿಕವಾಗಿ ಜೀವ ಕಳೆದುಕೊಂಡ ತಂದೆಯ ಅಂತ್ಯಕ್ರಿಯೆ ನೆರವೇರಿಸೋದಕ್ಕೆ ಅಣ್ಣ ತಮ್ಮನ ನಡುವೆ ಗಲಾಟೆ ನಡೆದಿದೆ. ಗಲಾಟೆ ಎಲ್ಲಾ ಆದ್ಮೇಲೆ, ತನ್ನ ತಂದೆಯ ಮೃತದೇಹದ ಅರ್ಧ ಭಾಗಕ್ಕೆ ಬೇಡಿಕೆ ಇಟ್ಟಿದ್ದಾನೆ. ಫೆಬ್ರವರಿ 2ನೇ ತಾರೀಖು, ಗಲಾಟೆ-ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಅಣ್ಣ ತಮ್ಮನ ನಡುವೆ, ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿದೆ. ಊರಿನವರು ಈ ಗಲಾಟೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ಪೊಲೀಸ್​​ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಚಿಕ್ಕಮಗ ದೇಶ್ ರಾಜ್​​ನೊಂದಿಗೆ ವಾಸವಿದ್ದ, 84 ವರ್ಷದ ಧ್ಯಾನಿ ಸಿಂಗ್ ಘೋಷ್ ಅನ್ನೋರು ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಈ ಬಗ್ಗೆ ಗ್ರಾಮದ ನಿವಾಸಿಯೊಬ್ಬರು, ದೊಡ್ಡ ಮಗ ಕಿಶನ್​​​ಗೆ ಮಾಹಿತಿ ಕೊಟ್ಟಿದ್ದಾರೆ. ಆಗ ತಮ್ಮನ ಮನೆಗೆ ಅಣ್ಣ ಬಂದಿದ್ದಾನೆ.ನಾನೇ ನನ್ನ ತಂದೆಯ ಅಂತ್ಯಕ್ರಿಯೆ ಮಾಡ್ತೀನಿ ಅಂತ ಗ್ರಾಮಕ್ಕೆ ಬಂದ ಹಿರಿಯ ಪುತ್ರ ಕಿಶನ್, ಮನೆಯಲ್ಲಿ ಹಾಗೂ ರಸ್ತೆಯಲ್ಲಿ ಕೂಗಾಟ ಹಾಗೂ ಗಲಾಟೆ ಮಾಡಿದ್ದಾನೆ. ಆದರೆ, ತನ್ನ ತಂದೆಯ ಅಂತ್ಯಕ್ರಿಯೆಯನ್ನು ತಾನೇ ಮಾಡಬೇಕು ಅನ್ನೋದು ಸಾವನ್ನಪ್ಪಿದ ತಂದೆ ಧ್ಯಾನಿಸಿಂಗ್ ಅಂತಿಮ ಬಯಕೆ. ಹೀಗಾಗಿ ನಾನು ಅಂತ್ಯಕ್ರಿಯೆ ಮಾಡ್ತೀನಿ ಅಂತ ಚಿಕ್ಕ ಮಗ ದೇಶ್ ರಾಜ್ ವಾದ ಮಾಡಿದ್ದಾನೆ.

ಡ್ರಿಂಕ್ಸ್ ಮಾಡಿ ಬಂದಿದ್ದ ಕಿಶನ್, ತನ್ನ ತಂದೆಯ ಮೃತದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ, ಅದನ್ನ ಅಣ್ಣ ತಮ್ಮನಿಗೆ ಹಂಚಬೇಕು ಅಂತ ಪಟ್ಟು ಹಿಡಿದಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಕಿಶನ್ ಮನವೊಲಿಸಿ ಕಿರಿಯ ಪುತ್ರ ದೇಶ್ ರಾಜ್, ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net