ಜುಲೈ 21ಕ್ಕೆ ಖುದ್ದು ಹಾಜರಾಗಿ: ಇಡಿಯಿಂದ ಸೋನಿಯಾ ಗಾಂಧಿಗೆ ಹೊಸ ನೋಟಿಸ್​ ಜಾರಿ

Sonia Gandhi
Published on

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಾಯ ಸಮನ್ಸ್​ ಜಾರಿ ಮಾಡಿದೆ.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ಹಾಜರಾಗಲು ಸೂಚಿಸಿದ್ದರೂ, ಒಂದಲ್ಲ ಒಂದು ಕಾರಣ ನೀಡಿ ಗೈರಾಗಿದ್ದ ಸೋನಿಯಾ ಗಾಂಧಿ ಅವರಿಗೆ ಈ ಬಾರಿ ಇಡಿ ಹಾಜರಾಗಲೇಬೇಕೆಂದು ಸೂಚಿಸಿದೆ.

ಜುಲೈ 21 ರಂದು ತಮ್ಮ ಮುಂದೆ ಹಾಜರಾಗಬೇಕೆಂದಿರುವ ಇಡಿ ಯಾವುದೇ ಕಾರಣ ನೀಡುವಂತಿಲ್ಲ ಎಂದೂ ಹೇಳಿದೆ. ಇದೇ ಪ್ರಕರಣದಲ್ಲಿ ಸಂಸದ ರಾಹುಲ್​ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ ಆರು ದಿನಗಳ ಕಾಲ ವಿಚಾರಣೆ ನಡೆಸಿದೆ. ಕರೊನಾ ಕಾರಣದಿಂದ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಿರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net