ಕ್ಯಾಮೆರಾಗಳ ಮುಂದೆ ತಾಳ್ಮೆ ಕಳೆದುಕೊಂಡ ಸೋನಾಕ್ಷಿ ಸಿನ್ಹಾ; ಇನ್ನೂ ಸಾಕು ನಿಲ್ಲಿಸಿ ಎಂದು ಪಾಪರಾಜಿಗಳ ವಿರುದ್ಧ ಕಿಡಿ..Sonakshi Sinha

Sonakshi Sinha Loses Cool With Paps
Sonakshi Sinha Loses Cool With Paps
Published on
Sonakshi Sinha Loses Cool With Paps: ಇತ್ತೀಚೆಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಟಿಯರು ಪಾಪರಾಜಿಗಳ ವಿರುದ್ಧ ಕಿಡಿಕಾರುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಈ ಪ್ರಕ್ರಿಯೆ ಮೊದಲು ಶುರುವಾಗಿದ್ದು, ಬಾಲಿವುಡ್​ನ ಹಿರಿಯ ನಟಿ ಜಯಾ ಬಚ್ಚನ್​​​ರಿಂದ. ಮಗಳೊಂದಿಗೆ ಇರುವ ಫೋಟೋ ಕ್ಲಿಕ್ಕಿಸುವಾಗ ಅನಾವಶ್ಯಕ ಮಾತುಗಳನ್ನಾಡಿದವರ ವಿರುದ್ಧ ಕಿಡಿಕಾರಿದ್ದರು. ಅಂದಿನಿಂದ ಇಲ್ಲಿಯವರೆಗೂ ಯುವ ನಟಿಯರು ಸಹ ತಮ್ಮ ಫೋಟೋಗಳನ್ನು ಅನುಮತಿ ಇಲ್ಲದೆ, ಎಲ್ಲೆಂದರಲ್ಲಿ ಕ್ಯಾಮೆರಾ ಹಿಡಿದು ಬರುವವರ ವಿರುದ್ಧ ಸಮರ ಸಾರುತ್ತಲೇ ಇದ್ದಾರೆ. ಈಗ ನಟಿ ಸೋನಾಕ್ಷಿ ಸಿನ್ಹಾ ಅವರ ಸರದಿ.
ಹೌದು, ಸೋಮವಾರ(ಜೂ.30)ರಂದು ಸೋನಾಕ್ಷಿ ಸಿನ್ಹಾ ಅವರ ಕುಟುಂಬವು ಮುಂಬೈನಲ್ಲಿನ ರೆಸ್ಟೋರೆಂಟ್​ವೊಂದರಲ್ಲಿ ಭೋಜನ ಕೂಟಕ್ಕೆ ಸೇರಿದ್ದರು. ಈವೇಳೆ ಅವರು ತಮ್ಮ ತಂದೆ ಶತ್ರುಘ್ನ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್​ರನ್ನು ಬೀಳ್ಕೊಟ್ಟರು. ಜೊತೆಗೆ ಸಂಬಂಧಿಕರ ಜೊತೆ ಅಪ್ಪುಗೆಯೊಂದಿಗೆ ಮಾತನಾಡಿಸಿ ಕಾರನ್ನು ಹತ್ತಿಸುತ್ತಿದ್ದರು. ಈ ವೇಳೆ ಪಾಪರಾಜಿಗಳು ಕಾರಿನೊಳಗಿದ್ದವರ ವಿಡಿಯೋ ಚಿತ್ರೀಕರಣಕ್ಕೆ ಪ್ರಯತ್ನಿಸುತ್ತಿದ್ದರು. ಇದರಿಂದ ಬೇಸತ್ತ ಅವರು ಸಾಕು ನಿಲ್ಲಿಸಿ ಎಂದು ಕೈ ಮುಗಿದರುವ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ರೆಸ್ಟೋರೆಂಟ್​ವೊಂದರಿಂದ ಮಾವ ಶತ್ರುಘ್ನ ಸಿನ್ಹಾರನ್ನು ಅಳಿಯ ಜಹೀರ್ ಇಕ್ಬಾಲ್​ರನ್ನು ಕರೆತರುವ ವಿಡಿಯೋ ಒಂದರಲ್ಲಿದೆ. ಅವರು ಕಾರಿನಲ್ಲಿ ಆಸೀನರಾದ ನಂತರ ತಿರುಗುವ ಸೋನಾಕ್ಷಿ ಸಿನ್ಹಾ ಗಾಯ್ಸ್​ ಸಾಕು ಮುಗಿತಲ್ಲ ಎಂದು ಕೈ ಮುಗಿದಿರುವುದು ವಿಡಿಯೋದಲ್ಲಿ ಇದೆ. ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದು ಇಂತವರಿಗೆ ಯಾಕಿಷ್ಟು ಇಂಪಾರ್ಟೆನ್ಸ್ ನೀಡುತ್ತೀರಾ ಎಂದು ಕಿಡಿಕಾರಿದ್ದಾರೆ.

ಕಾಕ್ಟೇಲ್​2ರಿಲೀಸ್​ ವೇಳೆ ರಶ್ಮಿಕಾಗೆ ಕೃತಿ ಕಾವಲು

ಇತ್ತೀಚೆಗೆ ಕಾಕ್ಟೇಲ್​ ಸಿನಿಮಾ ಪ್ರಚಾರದ ವೇಳೆ ಕ್ಯಾಮೆರಾಮೆನ್​ಗಳು, ಪಾಪರಾಜಿಗಳು ಹಾಗೂ ಜನರು ತುಂಬಿಕೊಂಡು ಫೋಟೋ, ವಿಡಿಯೋಗಳಿಗಾಗಿ ಮುಗಿಬಿದ್ದಿದ್ದರು. ಈ ವೇಳೆ ಜನರನ್ನು ದಾಟಿ ಹೋಗಲು ಕಷ್ಟ ಪಡುತ್ತಿದ್ದ ರಶ್ಮಿಕಾ ಅವರನ್ನು ಕೃತಿ ಸನೂನ್​ ಅವರು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದರು. ಇಷ್ಟೇ ಅಲ್ಲದೆ, ಇದಕ್ಕೆ ಬಾಡಿಗಾರ್ಡ್​ಗಳು ಸಹಾಯ ಮಾಡಿದ್ದರು.

ಸಪ್ತಮಿ ಗೌಡ ಕಿಡಿ

ಚಿತ್ರರಂಗದಲ್ಲಿರುವ ಮಹಿಳೆಯರಾಗಿ,ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳುಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ, ಕಲೆಯಿಗಿಂತೆನಮ ದೇಹದ ಮೇಲೆ ಅನಾವಶ್ಯಕೆವಾಗಿ ಜೂಮ್ ಮಾಡಿ ಪ್ರಸಾರಮಾಡುವ ಘಟನೆಗಳು ಪುನಃಪುನಃ ನಡೆಯುತ್ತಿವೆ. ಇಂತಹವರ್ತನೆ,ಕೆಲವರಿಂದ ನಡೆಯುತ್ತಿರುವುದಾದರೂ, ಅದು ಅಸಭ್ಯ,ಅವಮಾನಕಾರಿ ಮತ್ತುಸೆಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟಧಕ್ಕೆ ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲೆ. ಸಹಿಸುವುದಿಲ್ಲ ಎಂದು ಪೋಸ್ಟ್​ ಹಂಚಿಕೊಂಡಿದ್ದರು. ಇದಕ್ಕೆ ಕನ್ನಡ ನಟಿಯರು ಸಹ ಸಹಮತ ನೀಡಿದ್ದರು. (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net