

Murder: ತಮಿಳುನಾಡಿನ ಸೇಲಂ ಜಿಲ್ಲೆಯ ಮಗುಡಂಚವಾಡಿಯಲ್ಲಿ ಮಗನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದ ತನ್ನ ತಂದೆ ಮತ್ತು ಆತನ ಪ್ರಿಯತಮೆಯನ್ನು ಕೊಲೆಗೈದು, ಶವಗಳನ್ನು ಕತ್ತರಿಸಿ 2 ಕೆರೆಗೆಳಿಗೆ ಎಸೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಂದೆ ಪಳನಿಸ್ವಾಮಿ (47) ಮತ್ತು ಪಳನಿಸ್ವಾಮಿಯ ಸಂಗಾತಿ ಜಯಲಕ್ಷ್ಮಿ (38) ಮೃತರು. ಆರೋಪಿ ಮಗ ಆಕಾಶ್ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಮೃತ ಜಯಲಕ್ಷ್ಮಿ ಅವರ ಮಗಳು ಇತ್ತೀಚೆಗೆ ಆಕಾಶ್ಗೆ ಭೇಟಿಯಾಗಿ ತಂದೆ ಪಳನಿಸ್ವಾಮಿ 4 ವರ್ಷಗಳಿಂದ ತನಗೆ ಲೈಂಗಿಕ ಕಿರುಕುಳ ಕೊಡ್ತಿದ್ದಾನೆ. ಈ ವಿಷಯ ನನ್ನ ತಾಯಿಗೆ ತಿಳಿದಿದ್ದರೂ ಸುಮ್ಮನಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡು ಇಬ್ಬರನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ
ಆರೋಪಿ ಆಕಾಶ್ ತಾಯಿ ಜಯಂತಿ ಕೆಲವು ಗಲಾಟೆಗಳ ಬಳಿಕ ತನ್ನ ಪತಿ ಪಳನಿಸಾಮಿಯಿಂದ ದೂರವಾಗಿದ್ದರು. 4 ವರ್ಷಗಳ ಹಿಂದೆ ಪಳನಿಸಾಮಿ, ಜಯಲಕ್ಷ್ಮಿ,ಆಕೆಯ ಮಗಳು ಹಾಗೂ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಆಕಾಶ್ ಜೊತೆ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಪಳನಿಸಾಮಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಜಯಲಕ್ಷ್ಮಿಗೆ ಇದರ ಬಗ್ಗೆ ತಿಳಿದಿದ್ದರೂ ಅವನನ್ನು ತಡೆಯಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ವಿಷಯ ತಿಳಿದ ಆಕಾಶ್ ಆಗಸ್ಟ್ 17 ರಂದು ಮನೆಯೊಳಗೆ ಪಳನಿಸಾಮಿ ಮತ್ತು ಜಯಲಕ್ಷ್ಮಿ ಅವರ ಮೇಲೆ ಮಾಂಸದಂಗಡಿಯ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ತಲೆ, ಕಾಲುಗಳು ಮತ್ತು ಮುಂಡವನ್ನು ಕತ್ತರಿಸಿ,ಭಾಗಗಳನ್ನು ಎರಡು ವಿಭಿನ್ನ ಚೀಲಗಳಲ್ಲಿ ಹಾಕಿ, ಒಂದು ಚೀಲವನ್ನು ತಲೈಯೂರ್ ಕೆರೆಯಲ್ಲಿ, ಇನ್ನೊಂದನ್ನು ಈಗಾಪುರಂ ಕೆರೆಯಲ್ಲಿ ಎಸೆದಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಮುಂದಿನ ಕೆಲವು ದಿನಗಳಲ್ಲಿ ಪಳನಿಸಾಮಿ ಮತ್ತು ಜಯಲಕ್ಷ್ಮಿ ಇದ್ದಕ್ಕಿದ್ದಂತೆ ಕಾಣೆಯಾಗಿರುವುದರಿಂದ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು. ಕೇಳಿದಾಗ, ಆಕಾಶ್ ಅಸ್ಪಷ್ಟ ಮತ್ತು ದಾರಿತಪ್ಪಿಸುವ ಉತ್ತರಗಳನ್ನು ನೀಡಿದ್ದಾನೆ. ಗುರುವಾರ ತನ್ನ ಚಿಕ್ಕಪ್ಪನ ಬಳಿ ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್)