ಆ ಒಂದು ಕಾರಣಕ್ಕಾಗಿ ತಂದೆಯಿಂದಲೇ ಮಗನ ಬರ್ಬರ ಹತ್ಯೆ

murder
Published on

ಚಾಮರಾಜನಗರ: ಆಸ್ತಿ ಮೇಲಿನ ವ್ಯಾಮೋಹ ಎಂತಹ ಹೀನಕೃತ್ಯಕ್ಕೂ ಇಳಿಸಿಬಿಡುತ್ತದೆ. ಹೆತ್ತವರು, ಕರುಳಬಳ್ಳಿ ಸಂಬಂಧಿಕರನ್ನೂ ದಾಯಾದಿಯನ್ನಾಗಿ ಮಾಡುತ್ತದೆ. ಕೆಲವೊಮ್ಮೆ ಆಸ್ತಿಗಾಗಿ ಮಕ್ಕಳೇ ಅಪ್ಪ-ಅಮ್ಮನನ್ನು ಕೊಂದಿರುವ ಹಲವು ಪ್ರಕರಣವನ್ನ ಕಂಡಿದ್ದೇವೆ. ಈಗ ಅಪ್ಪನಿಂದಲೇ ಮಗನ ಬರ್ಬರ ಕೊಲೆಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹಳ್ಳಿಯಲ್ಲಿ ಆಸ್ತಿ ವ್ಯಾಜ್ಯಕ್ಕೆ ಶುರುವಾದ ತಂದೆ ಮಕ್ಕಳ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮಲ್ಲಿಕಾರ್ಜುನಪ್ಪ ಕೊಲೆಯಾದವ. ಇವರ ತಂದೆ ಮಹದೇವಪ್ಪ ಕೊಲೆ ಆರೋಪಿ. ಇದನ್ನೂ ಓದಿರಿ ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಎರಡು ವರ್ಷಗಳಿಂದ ಆಸ್ತಿಗಾಗಿ‌ ತಂದೆ-ಮಗನ ನಡುವೆ ಜಗಳ ನಡೆದಿತ್ತು. ಇದೀಗ ತಂದೆಯೇ ಮಗನನ್ನು ಕೊಂದಿದ್ದು, ಈ ಜಗಳ ಅಂತ್ಯ ಕಂಡಿದೆ. ಪ್ರಮುಖ ಆರೋಪಿ ಮಹದೇವಪ್ಪ. ಈತನ ಎರಡನೇ ಮಗ ಮಂತ್ರಪ್ಪ ಮತ್ತು ಇತರರು ಆರೋಪಿಗಳು. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net