VIDEO | ಚೇಷ್ಟೆಯ ಹೆಸರಲ್ಲಿ ತಾಯಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ..! ಮುಂದೇನಾಯ್ತು ಗೊತ್ತಾ?

viral gift
Published on

ನವದೆಹಲಿ: ಮದುವೆ, ಶುಭ ಸಮಾರಂಭಗಳ ಜತೆಗೆ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಜನ್ಮದಿನದಂದು ಅವರ ಸಂತೋಷ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಚಾಕೊಲೇಟ್, ಕೇಕ್, ಟೆಡ್ಡಿ ಬೇರ್, ಉಡುಪುಗಳು ಅಥವಾ ಇತರ ಉಪಯುಕ್ತ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಹುಟ್ಟುಹಬ್ಬಕ್ಕೆ ಸಿಕ್ಕ ಉಡುಗೊರೆ ನೋಡಿ ಶಾಕ್ ಆಗಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಮಹಿಳೆಯೊಬ್ಬರು ಕಣ್ಣು ಮುಚ್ಚಿ ಮಗನ ಉಡುಗೊರೆಗಾಗಿ ಕಾಯುತ್ತಿರುವುದನ್ನು ಕಾಣಬಹುದು. ನಂತರ ಎದುರು ಮೇಜಿನ ಮೇಲೆ ಒಂದು ಬಾಕ್ಸ್ ಇದೆ. ಅವಳು ತನ್ನ ಕಣ್ಣುಗಳನ್ನು ತೆರೆದು ತನ್ನ ಮುಂದೆ ದೊಡ್ಡ ಪೆಟ್ಟಿಗೆಯನ್ನು ನೋಡುತ್ತಾಳೆ. ಆ ಪೆಟ್ಟಿಗೆಯಲ್ಲಿ ಏನಾದರೂ ಸ್ಪೆಷಲ್ ಗಿಫ್ಟ್ ಇದೆ ಎಂದುಕೊಂಡು ಆ ಪೆಟ್ಟಿಗೆಯನ್ನು ತೆರೆಯಲು ಹೇಳಿದನಂತೆ. ಮಗನ ಕೋರಿಕೆಯಂತೆ ಅದನ್ನು ತೆರೆದಳು. ಆದರೆ ಪೆಟ್ಟಿಗೆಯನ್ನು ತೆರೆದಾಗ ಅವಳು ಹಾವು ನೋಡಿ ಓಡಿ ಹೋಗಿದ್ದಾಳೆ.

ಹಾವು ನಿಜವೋ ನಕಲಿಯೋ ಎಂಬುದು ತಿಳಿದುಬಂದಿಲ್ಲವಾದರೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ನೋಡಿದ ನಂತರ ನೆಟ್ಟಿಗರು, 'ಇದು ತುಂಬಾ ದುಬಾರಿ ಜೋಕ್. ಈ ತರಹ ತಮಾಷೆ ಮಾಡಿ ಆ ತಾಯಿಗೆ ಭಯ ಹುಟ್ಟಿಸಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net