

ಚಿಕ್ಕೋಡಿ/ಬೆಳಗಾವಿ: ಪಟ್ಟಣದ ಕೆಎಸ್‌ಆರ್‌ಟಿಸಿ ಚಾಲಕನೋರ್ವ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದೆ ಬುಧವಾರ ಅಳಲು ತೋಡಿಕೊಂಡಿದ್ದಾನೆ. 15 ವಷರ್ದಿಂದ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್.ಹಂಚಿನಮನಿ ಅವರ ಮಗ ಮೊಹಮ್ಮದ್ ಸೂಫಿಯಾನ್ ಮಾ.3ರಂದು ಬೆಂಕಿ ಅವಘಡದಲ್ಲಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಚಿಕಿತ್ಸೆ ಕೊಡಿಸಲು 2.50 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ವೆಚ್ಚ ಭರಿಸಲು ನನ್ನಿಂದ ಆಗುತ್ತಿಲ್ಲ. ಹೀಗಾಗಿ ವೈದ್ಯಕೀಯ ವೆಚ್ಚದ ಮುಂಗಡ ಹಣಕ್ಕಾಗಿ ಅಗತ್ಯ ವೈದ್ಯಕೀಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದೇನೆ. ಆದರೆ, ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಚಾಲಕ ಅಳಲು ತೋಡಿಕೊಂಡಿದ್ದಾನೆ. ನಾವು ಸಂಸ್ಥೆಯನ್ನೇ ಅವಲಂಬಿಸಿದ್ದು, ಅಧಿಕಾರಿಗಳು ಮುಂಗಡ ಹಣ ನೀಡಬೇಕೆಂದು ಚಾಲಕ ಮನವಿ ಮಾಡಿದ್ದಾರೆ.