ಬಾಲಿವುಡ್​ ಬಿಗ್​ಬಿ ಅಭಿನಯದ ಈ ಸಿನಿಮಾಗಳು ಇದುವರೆಗೂ ತೆರೆಕಂಡಿಲ್ಲ; ಅದರ ಹಿಂದಿನ ಕಾರಣ ಹೀಗಿದೆ.. | Amithabh Bachchan

Untitled design (76)
Published on

ಮುಂಬೈ: ಬಾಲಿವುಡ್​​​ ಬಿಗ್​ಬಿ ಅಮಿತಾಭ್​ ಬಚ್ಚನ್(Amithabh Bachchan)​ ಅವರು ಕುರಿತು ಪರಿಚಯದ ಅಗತ್ಯವಿಲ್ಲ. ಈ ಆಂಗ್ರಿ ಯಂಗ್ ಮ್ಯಾನ್ ತಮ್ಮ ಅಭಿನಯದಿಂದ ಮಾತ್ರವಲ್ಲ ಅವರ ವಾಯ್ಸ್​​​​ಗೆ ಫಿದಾ ಆಗದವರೇ ಇಲ್ಲ ಎನ್ನಬಹುದು. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ತಮ್ಮದೇ ಅಭಿಮಾನಿ ಬಳಗವನ್ನು ಅಮಿತಾಭ್​​ ಹೊಂದಿದ್ದಾರೆ.

ಅಮಿತಾಭ್​​ ಬಚ್ಚನ್​​ ಅವರ ಸಿನಿಮಾವನ್ನು ರಿಲೀಸ್ ಆದ ಮೊದಲ ದಿನವೇ ನೊಡಿ ಖುಷಿಪಟ್ಟವರು ಎಷ್ಟೋ ಮಂದಿ ಇದ್ದಾರೆ.​ ಅಂದ್ಹಾಗೆ ಇಲ್ಲಿ ನಾವು ಅಮಿತಾಭ್​ ಬಚ್ಚನ್​ ನಟನೆಯ ಇಂದಿಗೂ ಬಿಡುಗಡೆಯಾದ ಸಿನಿಮಾಗಳ ಕುರಿತು ತಿಳಿಸುತ್ತಿದ್ದೇವೆ. ಅಮಿತಾಭ್​​ ಬಚ್ಚನ್ ಮತ್ತು ರೇಖಾ ಜೋಡಿಯು ದುಲಾಲ್ ಗುಹಾ ಅವರ ದೋ ಅಂಜಾನೆ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿತು. ಆದರೆ ಈ ಚಿತ್ರಕ್ಕೆ ಮುಂಚೆಯೇ ಅಮಿತಾಭ್​​ ಮತ್ತು ರೇಖಾ ಮತ್ತೊಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಮಿತಾಭ್​ ಅವರ ಆ ಚಿತ್ರ ಬಿಡುಗಡೆಯಾಗಲಿಲ್ಲ. ಆ ಸಿನಿಮಾದ ಹೆಸರು ಅಪ್ನಾ ಪರಾಯ.

ಅಮಿತಾಭ್ ಬಚ್ಚನ್ ಮತ್ತು ಸುಜಿತ್ ಸಿರ್ಕಾರ್ ಶೂಬೈಟ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕಾನೂನು ಕಾರಣಗಳಿಂದ ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು ಎಂದು ಕೆಲವು ವರದಿಗಳು ತಿಳಿಸಿವೆ. ಅಮಿತಾಭ್​ ಬಚ್ಚನ್, ಜಯಾ ಬಚ್ಚನ್ ಮತ್ತು ರೇಖಾ ಒಟ್ಟಿಗೆ ಕಾಣಿಸಿಕೊಳ್ಳಬೇಕಿದ್ದ ಮತ್ತೊಂದು ಸಿನಿಮಾವನ್ನು ಹಣದ ಕೊರತೆಯಿಂದ ನಿಲ್ಲಿಸಬೇಕಾಯಿತು ಎನ್ನಲಾಗಿದೆ. ಆದರೆ ಆ ಸಿನಿಮಾದ ಹೆಸರು ಬಹಿರಂಗವಾಗಿಲ್ಲ.

ಅದಷ್ಟೆ ಅಲ್ಲ, ಪರ್ವೀನ್ ಬಾಬಿ, ಖಾದರ್ ಖಾನ್ ಮತ್ತು ಶಕ್ತಿ ಕಪೂರ್ ಅಮಿತಾಭ್​ ಬಚ್ಚನ್ ಅವರ ಸರ್ಫರೋಶ್ ಚಿತ್ರದಲ್ಲಿ ಒಟ್ಟಿಗೆ ಬರಬೇಕಿತ್ತು. ಆದರೆ ಚಿತ್ರವು ಸ್ಥಗಿತಗೊಂಡಿತು. ಇದಕ್ಕೆ ಕಾರಣ ಏನೆಂಬುದು ತಿಳಿದಿಲ್ಲ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net