ದುಡ್ಡಿಗಾಗಿ ಕೆಲ ಸಂಟನೆಗಳಿಂದ ಬಂದ್​ಗೆ ಕರೆ..!

17kolar5-s.muniswamy
Published on

ಕೋಲಾರ: ಮೊದಲಿನಿಂದಲೂ ಅಂಬೇಡ್ಕರ್​ಗೆ ಅಪಮಾನ ಮಾಡಿಕೊಂಡು ಬಂದಿರುವ ಕಾಂಗ್ರೆಸ್​, ಅವರ ಭಾವಚಿತ್ರ ಹಿಡಿಕೊಳ್ಳಲು ನೈತಿಕತೆಯಿಲ್ಲ ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

ನಗರ ಹೊರವಲಯದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ಗಾಂಧಿಗಳನ್ನು ಕರೆದುಕೊಂಡು ನಾನು ಅಂಬೇಡ್ಕರ್​ ಎನ್ನುತ್ತಾರೆ. ರಾಹುಲ್​ಗಾಂಧಿ ಇನ್ನು ಮರಿ, ಐ ಯಾಮ್​ ಅಂಬೇಡ್ಕರ್​ ಎಂದಿರುವ ರಾಹುಲ್​ ಜತೆಗೆ ಕಾಂಗ್ರೆಸ್​ ಸಂಸದರು ಕ್ಷಮೆಯಾಚಿಸಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಅಂಬೇಡ್ಕರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್​ ಹಾಗೂ ಹಲವು ಸಂಘಟನೆಗಳಿಂದ ಬಂದ್​ಗೆ ಕರೆ ನೀಡಲಾಗಿದೆ. ಕಾಂಗ್ರೆಸ್​ ಸುಡುವ ಮನೆ ಎಂದು ಅಂಬೇಡ್ಕರ್​ ಹೇಳಿದ್ದರೂ ಸಹ ಕೆಲವರು ಹಣ ಪಡೆದು ಕಾಂಗ್ರೆಸ್​ನವರ ಜತೆಗೆ ಹೋರಾಟಕ್ಕೆ ತೆರಳಿದ್ದು, ಅಂಬೇಡ್ಕರರಿಗೆ ಅವಮಾನ ಮಾಡಿರುವುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಈಗಾಗಲೇ ಕೇಂದ್ರ ಸರ್ಕಾರದಿಂದ ಅಂಬೇಡ್ಕರರ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ರಾಜ್ಯದಲ್ಲಿಯೂ ಕೆಜಿಎಫ್​ ಸೇರಿ 10 ಸ್ಥಳಗಳಿಗೆ ಅಂಬೇಡ್ಕರ್​ ಭೇಟಿ ನೀಡಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ರಾಜ್ಯಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಕುಡಾ ಮಾಜಿ ಅಧ್ಯಕ್ಷ ವಿಜಯ್​ ಕುಮಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಮಾಧ್ಯಮ ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ, ಮುಖಂಡರಾದ ಎಂ.ಪಿ.ನಾರಾಯಣಸ್ವಾಮಿ, ಸಾ.ಮಾ.ಅನಿಲ್​ ಬಾಬು, ಶಿಳ್ಳಂಗೆರೆ ಮಹೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net