

ಬೆಂಗಳೂರು: ರಾಜ್ಯದಲ್ಲಿರುವ 40 ಸಾವಿರ ಜಲ ಮೂಲಗಳು ಬೊಕ್ಕಸಕ್ಕೆ ಆದಾಯದ ಮೂಲಗಳನ್ನಾಗಿ ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸಲಹೆ ನೀಡಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸೋಮವಾರ ನಡೆದ ರಾಜ್ಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೆರೆಗಳಲ್ಲಿ ನೀರು ಶೇಖರಣೆ ಅಂತರ್ಜಲ ವೃದ್ಧಿ, ಮೀನುಗಾರಿಕೆ ಇಷ್ಟನ್ನೇ ಕಂಡುಕೊಂಡಿದ್ದೇವೆ.
‘ಹಸಿರು ಇಂಧನ’ ಕ್ಷೇತ್ರದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೊಸ ಆಯಾಮ ಪಡೆದಿದೆ. ಜಲ ಮೂಲದ ಮೇಲೆ ತೇಲುವ ಸೌರ ಫಲಕ ಅಳವಡಿಕೆಯು ವಿದ್ಯುತ್ ಉತ್ಪಾದನೆ ಜತೆಗೆ ನೀರು ಆವಿಯಾಗುವುದು, ಕೆರೆಗಳ ಒತ್ತುವರಿಯನ್ನು ನಿಯಂತ್ರಿಸಲಿದೆ.
ಸೌರ ಮೂಲದ ವಿದ್ಯುತ್ ಆದಾಯ ವೃದ್ಧಿಗೆ ನೆರವಾಗಲಿದೆ. ದೋಣಿ ವಿಹಾರ, ವ್ಯವಸ್ಥಿತವಾದ ಮೀನುಗಾರಿಕೆಯು ಆದಾಯ ಹೆಚ್ಚಿಸಿ, ಜನರ ಕೈಗೆ ಕೆಲಸ ಕೊಡಲ ಆಸರೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೆಕು ಎಂದು ಬೋಸರಾಜು ಸೂಚಿಸಿದರು.
ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದಾರೆ. ಸಿಎಂ ಆಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭೆ ಶೀಘ್ರ ನಡೆಯಲಿದೆ. ಅದಕ್ಕೂ ಬೇಕಾದ ತಯಾರಿ, ಹೊಸ ಉಪಕ್ರಮಗಳ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬಜೆಟ್‌ನಲ್ಲಿ ೋಷಿಸಿರುವ ಪ್ರಕಾರ ಕೆರೆ ಬಳಕೆದಾರರ ಸಂಘಗಳ ಪುನರುಜ್ಜೀವನಕ್ಕೆ ಕ್ರಮವಹಿಸಬೇಕು. ಅಲ್ಲದೆ, ಜವಾಬ್ದಾರಿ ಹೊತ್ತ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿದರೆ ಕೆಲಸವೂ ಸರಾಗ, ವೇಗವಾಗಿ ಮುಗಿಯಲಿದೆ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ರಾಘವನ್, ಆರ್ಥಿಕ, ಕಾನೂನು, ಸಹಕಾರ ಇಲಾಖೆಗಳು, ನಗರ ಯೋಜನೆ ಮತ್ತು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.