Aishwarya Rai ಸಲ್ಮಾನ ಜತೆಗಿನ ಸಂಬಂಧವನ್ನು ಎಂದೂ ಒಪ್ಪಿರಲಿಲ್ಲ! ಸೊಹೈಲ್ ಖಾನ್

Sohail Khan
Published on

ಮುಂಬೈ: ಸಿನಿ ರಂಗದಲ್ಲೇ ಸೆನ್ಸೆಷನ್ ಕ್ರಿಯೇಟ್ ಮಾಡಿದ ಜೋಡಿ ಅಂದ್ರೆ ಅದು ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ( Aishwarya Rai ). ಎಲ್ಲರನ್ನೂ ತಮ್ಮ ಅಭಿನಯದ ಮೂಲಕವೇ ಮೋಡಿ ಮಾಡಿದ ಜನಪ್ರಿಯ ಜೋಡಿ. ಇದೀಗ ಈ ಜೋಡಿ ಕುರಿತು ಸೊಹೈಲ್ ಖಾನ್ ಮಾಡಿದ್ದ ಹಳೆಯ ಕಾಮೆಂಟ್​ವೊಂದು ವೈರಲ್​​ ಆಗುತ್ತಿದೆ.

Aishwarya Rai

ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರು ' ಹಮ್ ದಿಲ್ ದೇ ಚುಕೇ ಶನಮ್ ' ಚಿತ್ರದ ವೇಳೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವು ಕಾಲಗಳ ನಂತರ ಐಶ್ವರ್ಯ ರೈ ಸಲ್ಮಾನ್ ಖಾನ್ ಜತೆ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಇವರಿಬ್ಬರ ಬ್ರೇಕಪ್ ಬಗೆಗಿನ ಹಳೆಯ ಕಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.

ಸೊಹೈಲ್ ಖಾನ್ " ಐಶ್ವರ್ಯ ರೈ ಬೀದಿಯಲ್ಲಿ ಕೊಳಕು ಲಾಂಡ್ರಿ ಬಟ್ಟೆಯನ್ನು ತೊಳೆಯುತ್ತಿದ್ದಳು. ಅವಳು ಸಲ್ಮಾನ್ ಜತೆಗೆ ರೀಲೆಷನ್​ಶೀಪ್​ನಲ್ಲಿ ಇರುವಾಗ ಎಲ್ಲ ಕಡೆ ಸುತ್ತಾಡಿದ್ದಾಳೆ. ಆಗಾಗ ನಮ್ಮ ಮನೆಗೂ ಭೇಟಿ ನೀಡುತ್ತಿದ್ದರು. ಐಶ್ವರ್ಯ ರೈ ನಮ್ಮ ಮನೆಯ ಒಂದು ಭಾಗವೇ ಆಗಿದ್ದಳು. ಆದರೆ ಅವಳು ಎಂದೂ ಸಲ್ಮಾನ ಜತೆಗಿನ ಸಂಬಂಧವನ್ನು ಒಪ್ಪಿರಲಿಲ್ಲ " ಎಂದು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಹೇಳಿದ್ದರು. ಅವನೊಂದಿಗೆ ಸಂಬಂಧದಲ್ಲಿದ್ದಾಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು.. ಮದ್ಯ ಸೇವಿಸಿದ ನಂತರ ಸಲ್ಮಾನ್ ಅವರ ಅನುಚಿತ ವರ್ತನೆಯಿಂದ ತನಗೆ ನೋವಾಗಿದೆ. ಇದು ತನ್ನ ಜೀವನದ ಅತ್ಯಂತ ಕೆಟ್ಟ ಹಂತ ಎಂದು ಬಣ್ಣಿಸಿರುವ ಆಕೆ ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ಹಿಂಸೆ, ದ್ರೋಹ ಮತ್ತು ಕೋಪವನ್ನು ಎದುರಿಸಬೇಕಾಗಿತ್ತು ಮತ್ತು ಈ ಎಲ್ಲ ವಿಷಯಗಳಿಂದಾಗಿ ಸಲ್ಮಾನ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ನಂತರ ಐಶ್ವರ್ಯಾ ಅವರ ಹೆಸರು ವಿವೇಕ್ ಒಬೆರಾಯ್ ಜೊತೆಗೆ ಸೇರಿಕೊಂಡಿತು ಮತ್ತು ನಂತರ ಅವರು ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.

ಐಶ್ವರ್ಯ ರೈ ಮತ್ತು ಅಭೀಷೆಕ್ ಬಚ್ಚನ್ ವೈವಾಹಿಕ ಸಂಬಂಧ ಚರ್ಚೆಯಲ್ಲಿದೆ. 2007 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಸಂಸಾರದಲ್ಲಿ ಈಗ ಕೆಲವು ಭಿನ್ನಾಬಿಪ್ರಾಯದಿಂದ ಸುದ್ದಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net