ಯುಯುಸಿಎಂಎಸ್​ ತಂತ್ರಾಂಶದಲ್ಲಿನ ದೋಷ ಸರಿಪಡಿಸಿ; ಎಬಿವಿಪಿ ಪ್ರತಿಭಟನೆ

23-RNR-05
Published on

ರಾಣೆಬೆನ್ನೂರ: ಯುಯುಸಿಎಂಎಸ್​ ತಂತ್ರಾಂಶದಲ್ಲಿನ ಲೋಪದೋಷ ಸರಿಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್​ (ಎವಿಬಿಪಿ) ವತಿಯಿಂದ ನಗರದ ಬಸ್​ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಎಸ್​ಜೆಎಂವಿ ಮಹಿಳಾ ಮಹಾವಿದ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಬಸ್​ ನಿಲ್ದಾಣಕ್ಕೆ ಬಂದು ಮಾನವ ಸರಪಳಿ ನಿಮಿರ್ಸಿ ಪ್ರತಿಭಟಿಸಿದರು.

ಸಂಟನೆಯ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸೇರಿ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿನ ಯುಯುಸಿಎಂಎಸ್​ ತಂತ್ರಾಂಶದಲ್ಲಿ ಬಹಳ ದೋಷಗಳಿವೆ. ಇದರಿಂದ ವಿದ್ಯಾಥಿರ್ಗಳು ಪರದಾಡುವಂತಹ ಸ್ಥಿತಿಗೆ ಬಂದಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್​ ಪರೀಕ್ಷೆಗಳು ಜನವರಿಯಲ್ಲಿ ನಡೆಯಲಿದ್ದು, ವಿದ್ಯಾಥಿರ್ಗಳು ಆನ್​ಲೈನ್​ ಮೂಲಕ ಪರೀಕ್ಷಾ ಅಜಿರ್ ತುಂಬುತ್ತಿದ್ದಾರೆ. ವಿದ್ಯಾಥಿರ್ಗಳ ಖಾತೆಯಿಂದ ಹಣ ಪಾವತಿಯಾಗುತ್ತಿದೆ. ಆದರೆ ಅಜಿರ್ ಸಲ್ಲಿಕೆ ಆಗದೆ ವಿದ್ಯಾಥಿರ್ಗಳು ಚಿಂತೆಗೀಡಾಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲವೆ ಆನ್​ಲೈನ್​ ವ್ಯವಸ್ಥೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಗ್ರೇಡ್​&2 ತಹಸೀಲ್ದಾರ್​ ಅರುಣ ಕಾರಗಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಮುಖರಾದ ಅಭಿಲಾಷ ಬಾದಾಮಿ, ವಿನಾಯಕ ತಾವರಗೊಂದಿ, ಯಲ್ಲಮ್ಮ, ಸವಿತಾ, ವೈಷ್ಣವಿ, ಬಸವರಾಜ, ಆಯುಷಾ, ಭಾರತಿ, ಶ್ವೇತಾ, ಗಗನದೀಪ, ನಾಗರಾಜ, ಭರತಕುಮಾರ ಹಾಗೂ ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net