

ಟರ್ಕಿ: ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಇತ್ತೀಚೆಗೆ ಚಂಡಮಾರುತ ಅಪ್ಪಳಿಸಿತ್ತು. ಈ ವೇಳೆ ಗಾಳಿಯ ರಭಸಕ್ಕೆ ಸೋಫಾ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಂಡಮಾರುತವು ಟರ್ಕಿಯ ರಾಜಧಾನಿ ಅಂಕಾರಾವನ್ನು ಅಪ್ಪಳಿಸಿತು, ಇದರಿಂದಾಗಿ ಮನೆಯ ಒಳಗಿದ್ದ ಪೀಠೋಪಕರಣಗಳು ಆಕಾಶದಲ್ಲಿ ಹಾರಿ ಹೊರಗೆ ಬಂದಿವೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಬಲವಾದ ಗಾಳಿಗೆ ಅಪಾರ ಆಸ್ತಿ ನಷ್ಟವಾಗಿದೆ.
ವಿಡಿಯೋದಲ್ಲಿ ಏನಿದೆ?: ಅಂಕಾರಾದಲ್ಲಿ ಬಲವಾದ ಬಿರುಗಾಳಿಯಿಂದಾಗಿ ಮನೆಯೊಳಗೆ ಇರಿಸಲಾದ ಪೀಠೋಪಕರಣಗಳು ಅಂದರೆ ಸೋಫಾ ಆಕಾಶದಲ್ಲಿ ಹಾರುವ ದೃಶ್ಯ ಸೆರೆಯಾಗಿದೆ. ಬಲವಾದ ಗಾಳಿಯಿಂದಾಗಿ ಸೋಫಾ ಆಕಾಶದಲ್ಲಿ ಹಾರಿ ಮತ್ತೊಂದು ಕಟ್ಟಡಕ್ಕೆ ಅಪ್ಪಳಿಸಿದೆ. ಈ ದೃಶ್ಯ ಚಂಡಮಾರುತದ ತೀವ್ರತೆ ಎಷ್ಟಿತ್ತು ಎನ್ನುವುದನ್ನು ತೋರಿಸಿದೆ.
ವಿಡಿಯೋ ಚಿತ್ರೀಕರಿಸಿದ ಓನೂರ್ ಕಲ್ಮಾಜ್, ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ. ಮನೆಯ ಒಳಗೆ ಇದ್ದ ಪೀಠೋಪಕರಣಗಳು ಗಾಳಿಯಲ್ಲಿ ಹಾರಿ ಬಂದು ತಮ್ಮ ತೋಟದಲ್ಲಿ ಬಿದ್ದಿವೆ ಎಂದು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಒಬ್ಬರು ಇಬ್ಬರಿಂದ ಸೋಫಾ ಎತ್ತವುದು ಕಷ್ಟ, ಹೀಗಿರುವಾಗ ಆ ಸೋಫಾ ಗಾಳಿಯಲ್ಲಿ ಹಾರಾಡುವುದು ಅಂದರೆ ಇದು ನಿಜಕ್ಕೂ ಆಶ್ಚರ್ಯಕರ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.