

ಹಾವೇರಿ: ತಾಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಸೇರಿದ 16 ವಿದ್ಯಾಥಿರ್ನಿಲಯ ಪ್ರವೇಶಕ್ಕೆ ಬಾಲಕ ಮತ್ತು ಬಾಲಕಿಯರಿಂದ ಅಜಿರ್ ಆಹ್ವಾನಿಸಲಾಗಿದೆ.
ಒಂದು ವಸತಿ ಶಾಲೆ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾಥಿರ್ ನಿಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಮತ್ತು ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಸತಿ ನಿಲಯಗಳಿಗೆ ಎಸ್ಸೆಸ್ಸೆಲ್ಸಿ ನಂತರದ ತರಗತಿಗಳ ವಿವಿಧ ಕೋರ್ಸಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ವಿದ್ಯಾಥಿರ್ಗಳಿಗೆ ಪ್ರವೇಶ ಕಲ್ಪಿಸಲಾಗುವುದು.
ಅಜಿರ್ ಸಲ್ಲಿಸಲು ವಿದ್ಯಾಥಿರ್ ಮತ್ತು ತಂದೆ&-ತಾಯಿಯ ಆಧಾರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಳೆದ ವರ್ಷದ ಅಂಕಪಟ್ಟಿ, ಕಾಲೇಜ ರಜಿಸ್ಟರ್ ನಂಬರ, ಬ್ಯಾಂಕ್ ಪಾಸ್ಬುಕ್ ಮತ್ತು ಪಾಸ್ ಪೋರ್ಟ್ ಸೈಜ್ ಕಲರ್ ಪೋಟೊ ನೀಡಬೇಕು. ಮಿಸಲಾತಿ ಆಧಾರದ ಮೇಲೆ ಅರ್ಹ ವಿದ್ಯಾಥಿರ್ಗಳ ಆಯ್ಕೆ ಮಾಡಲಾಗುವುದು. ವಿದ್ಯಾಥಿರ್ನಿಲಯಗಳ ಪ್ರವೇಶಕ್ಕೆ ಸಲ್ಲಿಸಿದ ಅಜಿರ್ಗಳನ್ನು ಮೇರಿಟ್ ಆಧಾರದ ಮೇಲೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪಕಿರ್ಸಬಹುದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂನೇಜಯ ಹುಲ್ಲಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.