ಸಹಕಾರ ಚಿಂತನೆಗಳಿಂದ ಸಮಾಜ ಸದೃಢ

skp stonelaying
ಈಸೂರು ಗ್ರಾಮದ ಪಿಎಸಿಎಸ್ ನೂತನ ಕಟ್ಟಡಕ್ಕೆ ಸಂಸದ ಬಿ.ವೈ.ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಡಿ.ಎಲ್.ಬಸವರಾಜ್, ಹಾಲೇಶ್, ಕರಿಬಸಪ್ಪ, ವಿಜಯಕುಮಾರ್, ಪುಷ್ಪಲತಾ ಇತರರಿದ್ದರು.
Published on

ಶಿಕಾರಿಪುರ: ನಮ್ಮ ಮನಸುಗಳು ಸಹಕಾರ ತತ್ವದ ಮನಸುಗಳಾಗಬೇಕು. ಇಂತಹ ಚಿಂತನೆಗಳಿಂದ ಸಮಾಜ ಸದೃಢವಾಗಬಲ್ಲದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಈಸೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹತ್ತಿರವಾಗಿ ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿವೆ. ಆದರೂ ಸಹಕಾರ ಸಂಘಗಳು ಇನ್ನಷ್ಟು ಜನಸ್ನೇಹಿ ಆಗಬೇಕು ಎಂದರು.

ಸಾಲ ತೆಗೆದುಕೊಂಡವರು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಸಾಲ ಕೊಟ್ಟ ಯಾವುದೇ ಸಂಸ್ಥೆಗಳು ನಷ್ಟ ಅನುಭವಿಸುವುದಿಲ್ಲ. ತೆಗೆದುಕೊಂಡ ಸಾಲಗಳನ್ನು ಮರುಪಾವತಿ ಮಾಡಿ. ಬರಗಾಲ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ರೈತರಿಗೆ ತೊಂದರೆ ಆದಾಗ ಸಹಕಾರ ಸಂಘಗಳು ರೈತರ ಬೆನ್ನಿಗೆ ನಿಲ್ಲಬೇಕು. ಆಗ ನಿಮ್ಮ ಬಗ್ಗೆ ರೈತರಿಗೆ ವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಪಿಎಸಿಎಸ್ ಅಧ್ಯಕ್ಷ ಹಾಲೇಶ್, ಉಪಾಧ್ಯಕ್ಷ ಕರಿಬಸಪ್ಪ, ವಿಜಯಕುಮಾರ್, ಪ್ರೇಮ್‌ಕುಮಾರ್, ಸುರೇಶ್, ಸತೀಶ್, ರೇವಪ್ಪ, ಗಂಗಪ್ಪ, ಸುರೇಶ್, ಕೆ.ಜಿ.ರುದ್ರಪ್ಪಯ್ಯ, ಪುಷ್ಪಲತಾ, ಹುಚ್ಚಪ್ಪ, ಗಂಗಣ್ಣ, ಹುಚ್ರಾಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net