ಚಿತ್ರ ವಿ-ಚಿತ್ರ: ಸಾಮಾಜಿಕ ಬದ್ಧತೆಗೆ ಸಿಕ್ಕಿದ ಉಡುಗೊರೆ

sudina 4
Published on

ನವದೆಹಲಿ: ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಜಾರ್ಜ್ ಫ್ಲಾಯ್್ಡ ಕೊಲೆಯ ಹಿನ್ನೆಲೆಯಲ್ಲಿ ‘ಬ್ಲಾ್ಯಕ್ ಲೈವ್ಸ್ ಮ್ಯಾಟರ್’ ಎಂಬ ಹೆಸರಿನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಅವುಗಳ ಬೆನ್ನಲ್ಲೇ ಅಲ್ಲಿನ ಬೀದಿಗಳಲ್ಲಿ ಬಿದ್ದ ಭಿತ್ತಿಪತ್ರಗಳು, ಪ್ಲಾಸ್ಟಿಕ್ ತ್ಯಾಜ್ಯ, ಆಹಾರ ಪೊಟ್ಟಣಗಳ ಕಸ ಸಂಗ್ರಹಣೆ ಕೂಡ ದೊಡ್ಡ ಸಮಸ್ಯೆಯಾಗಿದೆ.

ಈ ಸಂದರ್ಭದಲ್ಲಿ ನ್ಯೂಯಾರ್ಕ್​ನ ಬಫೆಲೋ ನಗರದ ಆಂಟೋನಿಯೋ ಗ್ವಿನ್ ಎಂಬ ವ್ಯಕ್ತಿ ಬೀದಿಗಳನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಮುಂದಾಗಿದ್ದಾರೆ. ತಾನೇ ಪೊರಕೆ ತಂದ ಆಂಟೋನಿಯೋ ಕಸವನ್ನೆಲ್ಲ ಸಂಗ್ರಹಿಸಿ ಕಸದ ಬ್ಯಾಗ್​ಗಳಿಗೆ ಹಾಕಿದ್ದಾರೆ. ಸುಮಾರು ಹತ್ತು ತಾಸುಗಳ ಕಾಲ ಈ ಕೆಲಸ ಮಾಡಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಲ್ಲಿನ ಉದ್ಯಮಿಯೊಬ್ಬರು ಆಂಟೋನಿಯೋಗೆ ಕೆಂಪು ಬಣ್ಣದ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದು, ಒಂದು ವರ್ಷದ ಮಟ್ಟಿಗೆ ಅದರ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net