ವಚನಗಳ ಮೂಲಕ ಸಮಾಜ ಸುಧಾರಣೆ

anp murugha mutt
ಆನಂದಪುರ ಮುರುಘಾ ಮಠದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಸಿದ್ದವೀರ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ, ಪ್ರಭುಕುಮಾರ ಸ್ವಾಮೀಜಿ ಉಪಸ್ಥಿತರಿದ್ದರು.
Published on

ಆನಂದಪುರ: ಹನ್ನೆರಡನೇ ಶತಮಾನದಲ್ಲಿ ವಚನ ಕ್ರಾಂತಿ ಮೂಲಕ ಶರಣರು ನುಡಿದಂತೆ ನಡೆದು ಸಮಾಜದ ಅಂಕುಡೊಂಕು ತಿದ್ದಿದ್ದಾರೆ ಎಂದು ತಾಳಗುಪ್ಪದ ಕೂಡಲಿ ಮಠದ ಶ್ರೀ ಸಿದ್ದವೀರ ಸ್ವಾಮೀಜಿ ತಿಳಿಸಿದರು.

ಮುರುಘಾಮಠದಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವದ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಜೀವನ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ಬದುಕು ಪರೋಪಕಾರ ಮತ್ತು ಸಹಬಾಳ್ವೆಯಿಂದ ಸಾಧ್ಯ. ಶಿವಶರಣರು ಸಮಾಜದಲ್ಲಿನ ಜಾತಿ, ಮತಗಳ ಅಂತರ ತೊಡೆದು ಹಾಕಿ ಸಮಾನತೆ ಪ್ರತಿಪಾದಿಸಿದ್ದರು ಎಂದರು.

ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ವಚನಗಳ ಮೂಲಕ ಶಿವಶರಣರು ಜೀವನ ಮೌಲ್ಯವನ್ನು ಜನರಲ್ಲಿ ಬಿತ್ತಿದ್ದಾರೆ. ಈ ಮೌಲ್ಯಗಳು ಇಂದಿಗೂ ಉಳಿಯಲು ಅದರ ನೈಜತೆಯೇ ಕಾರಣ ಎಂದು ತಿಳಿಸಿದರು.

ಹಿರೇಸಿಂಧೋಗಿ ವಿರಕ್ತ ಮಠದ ಶ್ರೀ ಚಿದಾನಂದ ಸ್ವಾಮೀಜಿ, ರಾಮದುರ್ಗ ವಿರಕ್ತ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ, ಕೆ.ಬಿದರೆಯ ಶ್ರೀ ಪ್ರಭುಕುಮಾರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ವಕೀಲ ಪ್ರವೀಣ, ಆಚಾಪುರ ಗ್ರಾಪಂ ಅಧ್ಯಕ್ಷ ಖಲೀಮುಲ್ಲಾ, ಸಾಗರದ ವೀರಶೈವ ಸಮಾಜದ ಅಧ್ಯಕ್ಷ ಗುರುರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net