98 ವರ್ಷ ವಯಸ್ಸಿನ ಡರೋತಿ ವಿಗ್ಗಿನ್ಸ್ ಈಗ ಸೋಶಿಯಲ್ ಮೀಡಿಯಾ ಸ್ಟಾರ್!​

Untitled design (49) (1)
Published on

ನ್ಯೂಯಾರ್ಕ್​: ಇಂದಿನ ಟೆಕ್ನಾಲಜಿ ಉನ್ನತ ಮಟ್ಟವನ್ನು ಏರುತ್ತಿದ್ದು, ಸಾಮಾಜಿಕ ಜಾಲತಾಣವು ಜನಸಾಮಾನ್ಯರನ್ನು ಶರವೇಗದಲ್ಲಿ ತಲುಪುತ್ತಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಎಂಥದ್ದೇ ಘಟನೆ ನಡೆದರು ಅದರ ವಿಡಿಯೋ ಅಥವಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಆದ್ರೆ ಸಾಕು, ಅತೀ ವೇಗವಾಗಿ ಎಲ್ಲರನ್ನೂ ತಲುಪಿ, ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ.

ಇದೇ ಸಾಲಿನಲ್ಲಿ ಇಲ್ಲೋರ್ವ 98ರ ವಯಸ್ಸಿನ ವೃದ್ಧೆ ತಮಗಿಷ್ಟವಾದ ಕೆಲಸಗಳನ್ನು ಮಾಡುವ ವಿಡಿಯೋಗಳು ಹೆಚ್ಚಿನ ವೀಕ್ಷಣೆ ಪಡೆಯುವುದರ ಜತೆಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಅಷ್ಟಕ್ಕೂ ಯಾರು ಈ ವೃದ್ಧೆ? ಇವರು ಸಾಮಾಜಿಕ ಜಾಲತಾಣದ ಸ್ಟಾರ್​ ಹೇಗೆ? ಇಲ್ಲಿದೆ ಮಾಹಿತಿ.

ಟಿಕ್ ಟಾಕ್ ಮತ್ತು ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ @ಡೋರೋ ಲವ್ಸ್ ನ್ಯೂಯಾರ್ಕ್​ ಎಂಬ ಐಡಿ ಹೊಂದಿರುವ 98 ವರ್ಷದ ಡರೋತಿ ವಿಗ್ಗಿನ್ಸ್​, ತಮ್ಮ ಕೆಲಸಗಳ ಮುಖೇನವೇ ವ್ಯಾಪಕವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. 9 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿರುವ ಈ ವೃದ್ಧೆ, ಟೆನಿಸ್ ಕೋರ್ಟ್‌ನಲ್ಲಿ ಯುವತಿಯರಂತೆ ಆಟವಾಡುತ್ತಾರೆ.

ಬಗೆ ಬಗೆಯ ತಿನಿಸು, ಹೋಟೆಲ್​ ಭೇಟಿ, ವಿಶೇಷ ಶೈಲಿಯ ಉಡುಗೊರೆ ತೊಡುವುದು ಈ ರೀತಿಯ ವಿಡಿಯೋಗಳ ಮೂಲಕ ಡರೋತಿ ನೆಟ್ಟಿಗರಿಂದ ಮೆಚ್ಚುಗೆ ಪಡೆದುಕೊಳ್ಳುವುದರ ಜತೆಗೆ ಹೆಚ್ಚಿನ ವೀಕ್ಷಣೆ ಗಳಿಸುತ್ತಿದ್ದಾರೆ. 98 ವಯಸ್ಸಿನಲ್ಲೂ ಈ ಉತ್ಸಾಹ, ಮಾತಿನ ಭರಾಟೆ ಹೊಂದಿರುವ ವಿಗ್ಗಿನ್ಸ್​ ಅವರ ಹುಮ್ಮಸ್ಸನ್ನು ಕಂಡು ಹಲವರು ಕಮೆಂಟ್​ ಮಾಡುತ್ತಾರೆ. ಇದೀಗ ಹಲವು ಸೆಲೆಬ್ರೆಟಿಗಳಂತೆ ಡರೋತಿ ವಿಗ್ಗಿನ್ಸ್​ ಕೂಡ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿರುವುದು ಒಂದು ರೀತಿ ವಿಶೇಷವೇ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net