ಸೋಶಿಯಲ್​ ಮೀಡಿಯಾ ಸೆಲೆಬ್ರಿಟಿಗೆ ದಾಸನ ಫ್ಯಾನ್ಸ್​ನಿಂದ ಕಿರುಕುಳ; ವಿಡಿಯೋ ಮಾಡಿ ಅಳಲು ತೋಡಿಕೊಂಡ ಸೋನು

Darshan Sonu
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಪ್ರಕರಣದ ಇತರೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ರೇಣುಕಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ನಟ ದರ್ಶನ್​ರಿಗೆ ಅವರ ಅಭಿಮಾನಿಗಳು ಬೆಂಬಲ ಸೂಚಿಸಿದ್ದು, ತಮ್ಮ ನೆಚ್ಚಿನ ನಟ ದೋಷಮುಕ್ತರಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಇದೀಗ ದಾಸನ ಅಭಿಮಾನಿಗಳು ಕೆಲ ನಟ-ನಟಿಯರಿಗೆ ಅವಾಚ್ಯವಾಗಿ ಮೆಸ್ಸೇಜ್​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬಿಗ್​ಬಾಸ್​ ಒಟಿಟಿ ಮಾಜಿ ಸ್ಪರ್ಧಿ, ಸೋಶಿಯಲ್​ ಮೀಡಿಯಾ ಸೆಲೆಬ್ರಿಟಿ ಸೋನು ಶ್ರೀನಿವಾಸ್​ ಗೌಡ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಯೂಟ್ಯೂಬ್​ನಲ್ಲಿ ವಿಡಿಯೋ ಒಂದನ್ನು ಪೋಸ್ಟ್​ ಮಾಡಿರುವ ಸೋನು, ದರ್ಶನ್ ಅಭಿಮಾನಿಗಳು ಯೂಟ್ಯೂಬ್, ಇನ್​ಸ್ಟಾಂ, ಫೇಸ್​ಬುಕ್​ನಲ್ಲಿ ತುಂಬಾ ಬ್ಯಾಡ್ ಕಮೆಂಟ್ಸ್ ಹಾಕುತ್ತಿದ್ದಾರೆ. ನಿಮ್ಮ ಡಿ ಬಾಸ್ ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ಒತ್ತಾಯಿಸುತ್ತಲೇ ಇದ್ದಾರೆ. ನಾವಿನ್ನೂ ಚಿಕ್ಕೋರು, ಅವರ ಬಗ್ಗೆ ಮಾತನಾಡುವಷ್ಟು ನಾವಿನ್ನೂ ಬೆಳೆದಿಲ್ಲ. ನಾವು ಯಾರಿಗಾದರೂ ಒಮ್ಮೆ ಅಭಿಮಾನಿಯಾದರೆ ಸಾಯುವವರೆಗೆ ಅಭಿಮಾನಿಯಾಗಿಯೇ ಇರುತ್ತೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಿಯೇ ಆಗುತ್ತೆ.

Sonu Gowda

ಒಳ್ಳೆಯರಾಗಿರಬಹುದು, ಕೆಟ್ಟವರಾಗಿರಬಹುದು, ತೀರ್ಪು ಅಂತ ಬರುತ್ತದೆ. ಅಲ್ಲಿಯವರೆಗೆ ಕಾಯೋಣ. ಅಲ್ಲಿಯವರೆಗೆ ದಯವಿಟ್ಟು ಕಾಯಿರಿ, ನಮಗೆ ಯಾವುದೇ ಥರ ಕೆಟ್ಟ ಸಂದೇಶಗಳನ್ನು, ಕಮೆಂಟ್ಸ್​ಗಳನ್ನು ಮಾಡಬೇಡಿ. ಅದೇ ರೀತಿ ಆ ಎರಡು ಕುಟುಂಬಗಳಿಗೂ ಸಹ ನ್ಯಾಯ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ.

ಆದಷ್ಟು ಬೇಗ ದರ್ಶನ್ ಅವರು ನಿರಪರಾಧಿ ಎಂದಾಗಿ ಜೈಲಿನಿಂದ ಹೊರಗೆ ಬರಲಿ. ಅವರು ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕಷ್ಟ ಎಂದವರಿಗೆ ಸಹಾಯ ಮಾಡಿದ್ದಾರೆ. ಅವರು ಇಂಥಹಾ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬುದು ನನ್ನ ವೈಯಕ್ತಿಕ ನಂಬಿಕೆ. ನನ್ನ ನಂಬಿಕೆ ನಿಜವಾಗಲಿ ಎಂದು ಬಯಸುತ್ತೀನಿ. ಎಲ್ಲರಿಗೂ ಒಳ್ಳೆಯದಾಗಲಿ, ಮತ್ತೊಮ್ಮೆ ಹೇಳುತ್ತಿದ್ದೀನಿ, ಕೆಟ್ಟ ಕಮೆಂಟ್ಸ್​ಗಳು ಬೇಡ ಎಂದು ಬಿಗ್​ಬಾಸ್​ ಒಟಿಟಿ ಮಾಜಿ ಸ್ಪರ್ಧಿ, ಸೋಶಿಯಲ್​ ಮೀಡಿಯಾ ಸೆಲೆಬ್ರಿಟಿ ಸೋನು ಶ್ರೀನಿವಾಸ್​ ಗೌಡ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net