

ಇಸ್ಲಾಮಾಬಾದ್: ತೆಹ್ರೀಕ್-ಇ-ಲಬೈಕ್ ಪಾಕಿಸ್ತಾನ್ (ಟಿಎಲ್ಬಿ) ಪಕ್ಷ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡ ಕಾರಣ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಟ್ವಿಟರ್, ಫೇಸ್ಬುಕ್, ವಾಟ್ಸ್ಆಪ್, ಯೂಟ್ಯೂಬ್, ಟೆಲಿಗ್ರಾಮ್ ತಾಣಗಳನ್ನು ಸ್ಥಗಿತಗೊಳಿಸುವಂತೆ ಆಂತರಿಕಭದ್ರತಾ ಸಚಿವಾಲಯ ದೂರಸಂಪರ್ಕ ಪ್ರಾಧಿಕಾರಕ್ಕೆ ಸೂಚಿಸಿದೆ.
ಪ್ರವಾದಿ ಪೈಂಗಬರ ರನ್ನು ಅವಹೇಳನ ಮಾಡುವ ವ್ಯಂಗ್ಯ ಚಿತ್ರವನ್ನು ಫ್ರಾನ್ಸ್ನ ನಿಯತಕಾಲಿಕೆಯೊಂದು ಪ್ರಕಟಿಸಿರುವ ಕಾರಣ ಫ್ರಾನ್ಸ್ನ ರಾಯಭಾರಿಯನ್ನು ಏ. 20ರೊಳಗೆ ಉಚ್ಚಾಟನೆ ಮಾಡುವಂತೆ ಟಿಎಲ್ಬಿ ಪಕ್ಷ ಗಡುವು ನೀಡಿದೆ.