Naga Chaitanya ಅವ್ರನ್ನ ಮದ್ವೆ ಆಗ್ತಿದ್ದಂತೆ ಬದಲಾಗಲಿದೆ ಶೋಭಿತಾ ಹೆಸರು! ವಿವಾಹಕ್ಕೂ ಮುನ್ನ ಅಕ್ಕಿನೇನಿ ಕುಟುಂಬಕ್ಕಾಗಿ ನಟಿ ತ್ಯಾಗ

Naga Chaitanya, Sobhita Dhulipala
Published on

ಹೈದ್ರಾಬಾದ್​:  ಸಮಂತಾ ಜತೆ ಬ್ರೇಕ್ ಅಪ್ ಆದ ನಂತರ ಕೆಲವು ದಿನ ಒಂಟಿಯಾಗಿದ್ದ ನಾಗ ಚೈತನ್ಯ ( Naga Chaitanya ), ನಂತರ ಸೋಭಿತಾಳನ್ನು ಪ್ರೀತಿಸುತ್ತಿದ್ದರು. ಆಗಸ್ಟ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ಸರಳವಾಗಿತ್ತು. ಮದುವೆ ಅದ್ಧೂರಿಯಾಗಿ ನಡೆಯಲಿದೆ. ಸದ್ಯ ಮದುವೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿರುವ ಬೆನ್ನಲ್ಲೆ ಒಂದು ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ. ಆಮಂತ್ರಣಗಳನ್ನು ಈಗಾಗಲೇ ಕಳುಹಿಸಲಾಗಿದೆ. ನಾಗ ಚೈತನ್ಯ ಮತ್ತು ಸೋಭಿತಾ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಯ್ಕೆಯಾದ ಶುಭ ಮುಹೂರ್ತದ ಪ್ರಕಾರ ಡಿಸೆಂಬರ್ 4 ರಂದು ರಾತ್ರಿ 8:13 ಕ್ಕೆ ಚೈತನ್ಯ ಅವರು ಸೋಭಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮೂಲಕ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮದುವೆಗಾಗಿ ಸೋಭಿತಾ ಎರಡು ಮಹತ್ವದ ತ್ಯಾಗ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮದುವೆಯ ನಂತರ ಅವರ ಹೆಸರು ಲಕ್ಷ್ಮಿ ಸೋಭಿತಾ ಎಂದು ಬದಲಾಗುತ್ತಿದೆ ಎಂದು ವರದಿಯಾಗಿದೆ.

ಮದುವೆಯ ನಂತರ ವಧುವಿನ ಹೆಸರಿನ ಮುಂದೆ ವರನ ಮನೆತನದ ಹೆಸರು ಸೇರ್ಪಡೆಯಾಗುವುದು ಸಹಜ. ಆದರೆ ಇಲ್ಲಿ ಮನೆತನದ ಹೆಸರು ಚರ್ಚೆಯಾಗಿಲ್ಲ.. ಸೋಭಿತಾ ಅವರ ನಿಜವಾದ ಹೆಸರು ಬದಲಾಗುತ್ತಿದೆ. ಇನ್ನು ಮುಂದೆ ಇವರ ಹೆಸರು ಲಕ್ಷ್ಮಿ ಸೋಭಿತಾ ಎಂದು ಇರಲಿದೆ ಎನ್ನಲಾಗಿದೆ.

naga chaitanya

ಲಕ್ಷ್ಮಿ ಸೋಭಿತಾ ಅವರ ಪೂರ್ಣ ಹೆಸರು ಅಥವಾ ಅದನ್ನು ಮದುವೆಗೆ ಬದಲಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಶೋಭಿತಾ ಹೆಸರು ಬದಲಾಗುವುದು ಖಚಿತ. ಮತ್ತೊಂದು ಕುತೂಹಲಕಾರಿ ವದಂತಿ ಎಂದರೆ ನಾಗ ಚೈತನ್ಯ ಕುಟುಂಬಕ್ಕಾಗಿ ಸೋಭಿತಾ ತನ್ನ ಮೇಕಪ್‌ನಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ. ನಾಗ ಚೈತನ್ಯ ಅವರ ಅಜ್ಜನ ಪರಂಪರೆಯನ್ನು ಗೌರವಿಸುವ ಮೂಲಕ ಅವರು ಸಾಂಪ್ರದಾಯಿಕ, ನೈಸರ್ಗಿಕ ನೋಟವನ್ನು ಆರಿಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ನಾಗ ಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಲಕ್ಷ್ಮಿ ದಗ್ಗುಬಾಟಿ ಅವರ ಇಚ್ಛೆಯಂತೆ ವಿದೇಶಿ ಬ್ರ್ಯಾಂಡ್‌ಗಳ ಬದಲಿಗೆ, ಸೋಭಿತಾ ಕಂಜೀವರಂ ಸೀರೆಗಳು ಮತ್ತು ಸಾಂಪ್ರದಾಯಿಕ ಆಭರಣಗಳಿಗೆ ಆದ್ಯತೆ ನೀಡಲಿದ್ದಾರೆ. ಲಕ್ಷ್ಮಿ ದಗ್ಗುಬಾಟಿ ಅವರು ತಮ್ಮ ಕೆಲವು ಆಭರಣಗಳನ್ನು ಸೋಭಿತಾ ಅವರಿಗೆ ಮದುವೆಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಸೋಭಿತಾ ಅವರು ಈ ಸಂಪ್ರದಾಯಗಳನ್ನು ಸ್ವೀಕರಿಸಲು ಸಂತೋಷಪಡುತ್ತಾರೆ ಎಂದು ವರದಿಯಾಗಿದೆ, ಈ ಹಿಂದೆ ಸಂದರ್ಶನವೊಂದರಲ್ಲಿ ತಾನು ಸಾಂಪ್ರದಾಯಿಕ ವಿವಾಹಕ್ಕೆ ಆದ್ಯತೆ ನೀಡುತ್ತೇನೆ ಎಂದು ಈ ಹಿಂದೆ ಕೂಡಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net