ಪೊಲೀಸ್ ಜೀಪ್ ಮೇಲೆ ಹತ್ತಿ ಎಂಟ್ರಿ ಕೊಟ್ಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್; 'ತುಂಬಾ ಅಗೌರವ' ಎಂದು ಟೀಕೆ ಮಾಡಿದ ಫ್ಯಾನ್ಸ್​

So disrespectful Akshay Kumar Tiger Shroff's entry on top of police car at Umang 2023 stirs criticism
Published on

ಮುಂಬೈ: ಉಮಂಗ್ 2023 ರ ಸಮಾರಂಭವು ಡಿಸೆಂಬರ್ 23 ರ ಶನಿವಾರದಂದು ನಡೆಯಿತು. ಈವೆಂಟ್ ವೇಳೆ ಖ್ಯಾತ ನಟ ಅಕ್ಷಯ್​ ಕುಮಾರ್​ ಹಾಗೂ ಟೈಗರ್​ ಶ್ರಾಫ್​​ ಮುಂಬೈ ಪೊಲೀಸರನ್ನು ಗೌರವಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಅಕ್ಷಯ್​ ಕುಮಾರ್​ ಹಾಗೂ ಟೈಗರ್​ ಶ್ರಾಫ್ ಅವರ ವಿಶಿಷ್ಟ ಶೈಲಿಯ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆಯಲು ಸಮಾರಂಭದಲ್ಲಿ ಪೊಲೀಸ್ ಜಿಪ್​​ನ ​ ಮೇಲ್ಭಾಗದಲ್ಲಿ ನಿಂತು ಅಪಾಯಕಾರಿ ಪ್ರವೇಶವನ್ನು ಮಾಡುತ್ತಿದ್ದಾರೆ.

ವೀಡಿಯೊದಲ್ಲಿ, ಅಕ್ಷಯ್ ಕಪ್ಪು ಬಣ್ಣದ ಕಾರ್ಗೋ ಪ್ಯಾಂಟ್‌ನೊಂದಿಗೆ ಬಿಳಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಟೈಗರ್ ಬೂದು-ಬಣ್ಣದ ಟೀ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ.ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ಕೂಡಲೇ, ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋಗೆ ತಮ್ಮ ಪ್ರತಿಕ್ರಿಯೆಯೊಂದಿಗೆ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, ''ಮಹಾರಾಷ್ಟ್ರ ಪೊಲೀಸರು ಈ ಸ್ಟಂಟ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಇದು ಅಗೌರವ. ಇದು ಒಳ್ಳೆಯದಲ್ಲ.. ಪೊಲೀಸ್ ವಾಹನಕ್ಕೆ ಅವಮಾನ.. ನಾಚಿಕೆಗೇಡು. ಎಂದು ಕಾಮೆಂಟ್ ಮಾಡುವ ಮೂಲಕವಾಗಿ ಆಕ್ರೊಶ ಹೊರ ಹಾಕಿದ್ದಾರೆ.

ಕೆಲವು  ದಿನಗಳ ಹಿಂದೆ ಬಾಲಿವುಡ್ ನಟರು ಉತ್ತಮ ಸ್ಥಾನದಲ್ಲಿದ್ದು, ಉನ್ನತ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ನೋಟಿಸ್ ಜಾರಿ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net