21 ವರ್ಷ ಹಿರಿಯ ರಾಜಕಾರಣಿಯನ್ನು ಮದ್ವೆಯಾದ ನಟಿ ಸ್ನೇಹಲ್ ರೈ ಕಾರು ಅಪಘಾತ!

snehal rai
Published on

ಮುಂಬೈ: ನಟಿ ಸ್ನೇಹಲ್ ರೈ ತಮಗಿಂತ 21 ವರ್ಷದ ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿರುವುದಾಗಿ ಹೇಳಿ ಸುದ್ದಿಯಾಗಿದ್ದರು. ಆದರೆ ಇದೀಗ ಭೀಕರವಾದ ರಸ್ತೆ ಅಪಘಾತದಿಂದ ಪಾರಾಗಿ ಬಂದಿರುವ ಕುರಿತಾಗಿ ಸೋಶಿಯಲ್​​ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರವಾದ ಕಾರು ಅಪಘಾತದಿಂದ ನಟಿ ಸ್ನೇಹಲ್ ರೈ ಬದುಕುಳಿದಿದ್ದಾರೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

ಕಾರು ನಿನ್ನೆ ಅಪಘಾತಕ್ಕೀಡಾಗಿದೆ. ಮುಂಬೈ-ಪುಣೆ ಹೈವೇನಲ್ಲಿ ಈ ಘಟನೆ ನಡೆದಿದೆ. ಸ್ನೇಹಲ್ ಪುಣೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿ ಬಳಿ ಈ ದುರ್ಘಟನೆ ನಡೆದಿದೆ. ಮುಂಬೈ ಮೂಲಕ ಪಾಸ್ ಆಗುವಾಗ ಟ್ರಕ್ ಒಂದು ನಟಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಸ್ನೇಹಲ್ ಹಾಗೂ ಅವರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Snehal Rai Survives A Deadly Car Accident

ನಟಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಯಾರೂ ಆತಂಕಗೊಳ್ಳಬೇಡಿ, ನಾನು ಆರಾಮಾಗಿದ್ದೇನೆ. ಅಪಘಾತ ಸಂಭವಿಸಿದಾಗ ಹೆದರಿಕೊಂಡಿದ್ದೆ. ಇನ್ನು ಕೆಲವು ದಿನಗಳ ತನಕ ಟ್ಯಾಕ್ಸಿ ಜಿಂದಾಬಾದ್ ಎಂದು ಬರೆದುಕೊಂಡಿದ್ದಾರೆ. ಈ ನಡುವೆಯೇ, ಸ್ನೇಹಲ್​, ಟ್ರಕ್ ಮಾಲೀಕರನ್ನು ನಷ್ಟ ಪರಿಹಾರ ಕೊಡುವಂತೆ ಕೇಳಿದ್ದರು. ಆದರೆ ಟ್ರಕ್​ ಚಾಲಕ ನಟಿಯನ್ನು ಬೆದರಿಸಿದ್ದಲ್ಲದೆ ಪರಿಹಾರ ಕೊಡಲು ನಿರಾಕರಿಸಿದ್ದಾನೆ ಹಾಗೂ ಅಪಘಾತ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸ್ನೇಹಲ್ ರೈ ಮಾತನಾಡಿ, ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿದ್ದೇನೆ. ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ ಬಹಿರಂಗಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net