VIDEO/ ತನ್ನನ್ನು ಕಾಪಾಡಲು ಬಂದ ಉರಗ ರಕ್ಷಕನನ್ನೇ ಕಚ್ಚಿದ ನಾಗರಹಾವು!

SnakeSeshappa
Published on

ಹಾಸನ: ಯಂತ್ರದ ಬಿಡಿಬಾಗದೊಳಗೆ ಸಿಲುಕಿದ್ದ ಹಾವನ್ನು ರಕ್ಷಿಸಲು ಬಂದ ಉರಗ ರಕ್ಷಕ ಸ್ನೇಕ್ ಶೇಷಪ್ಪ ಅವರಿಗೆ ನಾಗರಹಾವು ಕಚ್ಚಿದ್ದು, ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಬುಧವಾರ ಮಧ್ಯಾಹ್ನ ಹಾಸನದ ಕೈಗಾರಿಕಾ ಕೇಂದ್ರದ ಕಾರ್ಖಾನೆಯೊಂದರ ಯಂತ್ರದ ಬಿಡಿಭಾಗದೊಳಗೆ ನಾಗರಹಾವು ಸೇರಿಕೊಂಡಿತ್ತು. ಕಾರ್ಖಾನೆಯವರ ಮನವಿ ಮೇರೆಗೆ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸ್ನೇಕ್​ ಶೇಷಪ್ಪ ಬಂದಿದ್ದರು.

ಯಂತ್ರದ ಬಿಡಿಭಾಗದಲ್ಲಿ ಹಾವಿನ ಹೊಟ್ಟೆ ಸಿಲುಕಿತ್ತು. ಅದನ್ನು ಹಿಡಿದ ಶೇಷಪ್ಪ, ಹಾವಿನ ದೇಹಕ್ಕೆ ಸುತ್ತಿಕೊಂಡಿದ್ದ ಕಬ್ಬಿಣವನ್ನು ಬಿಡಿಸುತ್ತಿದ್ದರು. ಈ ವೇಳೆ ಅವರ ಎಡಗೈ ಹೆಬ್ಬೆರಳಿಗೆ ಹಾವು ಕಚ್ಚಿದೆ. ತಮಗೆ ಹಾವು ಕಚ್ಚಿದರೂ ಧೃತಿಗೆಡ ಶೇಷಪ್ಪ, ಹಾವನ್ನು ರಕ್ಷಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು. ಈ ದೃಶ್ಯ ನೋಡಲು ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net